ಸಾಗರಮಾಲಾ ಯೋಜನೆ ವಿರೋಧಿ ಪ್ರತಿಭಟನೆ: ಮೀನಿಲ್ಲದೆ ಬರಿದಾದ ಕರಾವಳಿ ಜನರ ಬಟ್ಟಲು! - ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರೋಧಿ ಪ್ರತಿಭಟನೆ
🎬 Watch Now: Feature Video
ಕರಾವಳಿಗರಿಗೆ ಮೀನು ಅಂದ್ರೆ ಪಂಚಪ್ರಾಣ. ಮೀನಿನ ಖಾದ್ಯವಿಲ್ಲದೆ ಹೊತ್ತಿನ ಊಟ ಮಾಡುವುದು ಬಹುತೇಕರಿಗೆ ಕಷ್ಟ. ಆದ್ರೆ ಕಡಲನಗರಿ ಕಾರವಾರದಲ್ಲಿ ಇದೀಗ ಮೀನಿಗಾಗಿ ಜನರು ಪರದಾಡುವಂತಾಗಿದೆ. ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಎಲ್ಲ ಮೀನುಗಾರರು ಪ್ರತಿಭಟನೆ ಮುಂದುವರಿಸಿದ್ದು, ಮೀನುಗಾರ ಮಹಿಳೆಯರು ಮೀನು ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಳೆದ ಒಂದು ವಾರದಿಂದ ನಗರದಲ್ಲಿ ಮೀನು ಸಿಗದೆ ಮತ್ಸ್ಯ ಪ್ರಿಯರು ಕಂಗಾಲಾಗಿದ್ದಾರೆ.