ಕುಕನೂರು: ಅದ್ಧೂರಿಯಾಗಿ ನೆರವೇರಿದ ಸರ್ವಾಧ್ಯಕ್ಷರ ಮೆರವಣಿಗೆ - ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಇಂದು ಸಂಭ್ರಮದಿಂದ ನೆರವೇರಿತು. ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ ಅವರನ್ನು ಅಲಂಕೃತ ವಾಹನದಲ್ಲಿ ಬೆಣಕಲ್ ಗ್ರಾಮದ ಶ್ರೀ ಅನ್ನದಾನೀಶ್ವರ ಮಠದಿಂದ ಸಮ್ಮೇಳನದ ಮುಖ್ಯವೇದಿಕೆಗೆ ಕರೆ ತರಲಾಯಿತು. ಕುಂಭಹೊತ್ತ ಮಹಿಳೆಯರು, ನಂದಿಧ್ವಜ, ಮಹಿಳಾ ವೀರಗಾಸೆ ತಂಡ, ದೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.