thumbnail

ಪೊಲೀಸ್​ v/s ಮಾಧ್ಯಮ ಮಿತ್ರರ ಕ್ರಿಕೆಟ್​ ಪಂದ್ಯ: ಪೊಲೀಸರಿಗೆ ಜಯ

By

Published : Dec 11, 2019, 7:22 PM IST

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಹಿನ್ನಲೆ ದಾವಣಗೆರೆ ಪೊಲೀಸ್ ಹಾಗೂ ಮಾಧ್ಯಮ ತಂಡದ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ವರದಿಗಾರರ ಕೂಟದ ತಂಡ ನಿಗದಿತ ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 55 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ್ದ ಪೊಲೀಸ್​ ತಂಡ 56 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಕ್ರೀಡಾಕೂಟದಲ್ಲಿ ಎಸ್​ಪಿ ಹನುಮಂತರಾಯ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ ಎನ್ ಮಲ್ಲೇಶ್, ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಭಾಗವಹಿಸಿ ಎರಡು ತಂಡಕ್ಕೆ ಸ್ಪೂರ್ತಿ ತುಂಬಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.