thumbnail

By

Published : Apr 22, 2020, 5:06 PM IST

ETV Bharat / Videos

ಹೆಲ್ಮೆಟ್​, ಸೀಟ್​​ಬೆಲ್ಟ್​​​ ಧರಿಸದಿದ್ರೆ ದಂಡ​​; ಸುಡು ಬಿಸಿಲಿನಲ್ಲಿ ಪೊಲೀಸರ ಕಾರ್ಯಾಚರಣೆ- ಪ್ರತ್ಯಕ್ಷ ವರದಿ

ಬೆಂಗಳೂರು: ಲಾಕೌಡೌನ್ ಹಿನ್ನೆಲೆ ವಾಹನ ಸವಾರರು ನಿಯಮ ಮೀರಿ ‌ಸಂಚರಿಸುತ್ತಿದ್ದಾರೆ. ಹೀಗಾಗಿ, ಖುದ್ದು ಹಿರಿಯ ಅಧಿಕಾರಿಗಳೇ ಕಾರ್ಯಾಚರಣೆಗೆ ಇಳಿದು ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೂ 36,900 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್​ಡೌನ್​​ ಜಾರಿಯಾದ ನಂತರ ಅಗತ್ಯ ವಸ್ತುಗಳು ಖರೀದಿಸಲು ಸವಾರರು ಹೆಲ್ಮೆಟ್​, ಸೀಟ್​ಬೆಲ್ಟ್​ ಧರಿಸದೇ ಓಡಾಡುತ್ತಿದ್ದರು. ಆಗ ಯಾವುದೇ ರೀತಿ ದಂಡ ವಿಧಿಸುತ್ತಿರಲಿಲ್ಲ. ಪ್ರಸ್ತುತ ಓಡಾಡುವವರ ಸಂಖ್ಯೆ ಹೆಚ್ಚಾದ ಪರಿಣಾಮ, ಇಂದಿನಿಂದ ಹೆಲ್ಮೆಟ್​​, ಸೀಟ್​​ಬೆಲ್ಟ್ ಹಾಕದೇ ಓಡಾಡುವವರಿಗೆ ದಂಡ ಹಾಕುತ್ತಿದ್ದಾರೆ. ಪ್ರತಿದಿನ ಎಷ್ಟು ವಾಹನಗಳು ಓಡಾಟ ಮಾಡುತ್ತಿವೆ ಎಂಬುದರ ಮಾಹಿತಿಗಾಗಿ, ದಿನಾಲು ರಸ್ತೆಗಳಿಯುವ ವಾಹನಗಳ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುತ್ತಿದ್ದಾರೆ. ಸದ್ಯದ ವಾಸ್ತವ ಚಿತ್ರಣವನ್ನ ನಮ್ಮ ಪ್ರತಿನಿಧಿ ವಾಕ್​ಥ್ರೂ ಮೂಲಕ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.