ಕೊರೊನಾಗಿಂತಲೂ ಗ್ರಹಣಕ್ಕೆ ಭಯಬಿದ್ದ ಚಿಕ್ಕಮಗಳೂರು.. - ಸೂರ್ಯ ಗ್ರಹಣ ಭಯ
🎬 Watch Now: Feature Video
ಜಿಲ್ಲೆಯಲ್ಲಿ ಕೊರೊನಾ ವೈರಸ್ಗಿಂತ ಸೂರ್ಯ ಗ್ರಹಣಕ್ಕೆ ಜನರು ಹೆದರಿದಂತೆ ಕಾಣಿಸಿತು. ಸೂರ್ಯ ಗ್ರಹಣ ಹಿನ್ನೆಲೆ ನಗರದಲ್ಲಿ ಜನರಿಲ್ಲದೇ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿ ಬಂದ್ ಮಾಡಿದ ವಾತಾವರಣ ನಿರ್ಮಾಣವಾಗಿತ್ತು. ಗ್ರಹಣ ಕಾರಣದಿಂದ ಬೆಳಗ್ಗೆಯಿಂದಲೇ ಜನ ಮನೆಯಲ್ಲಿಯೇ ಉಳಿದಿದ್ದರು. ಮನೆ ಬಿಟ್ಟು ಹೊರ ಬರದೇ ಜನರು ಉಳಿದಿದ್ದು ವಿಶೇಷ. ಕೊರೊನಾ ವೈರಸ್ ಬಂದಿದೆ, ಬೀದಿಗೆ ಬರಬೇಡಿ ಅಂದ್ರೂ ಜನ ಅದಕ್ಕೆ ತಲೆಕೆಡಿಸಿಕೊಳ್ಳದೆ ಬೀದಿಗೆ ಬಂದು ಕಾಲ ಕಳೆಯುತ್ತಿದ್ದರು. ಆದರೆ, ಇಂದು ಸೂರ್ಯಗ್ರಹಣ ಹಿನ್ನೆಲೆ ಬೆರಳೆಣಿಕೆಯಷ್ಟು ಜನ ಮಾತ್ರ ಬೀದಿಗಳಲ್ಲಿ ಕಾಣಿಸಿದರು. ಮೂಡಿಗೆರೆ, ಕಡೂರು, ಶೃಂಗೇರಿ, ಕೊಪ್ಪ, ಎನ್‌ಆರ್‌ಪುರ, ಚಿಕ್ಕಮಗಳೂರು ನಗರದಲ್ಲಿ ಬಂದ್ ರೀತಿ ವಾತವರಣ ನಿರ್ಮಾಣವಾಗಿತ್ತು.