ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಯುವ ಉತ್ಸಾಹಿಗಳಿಂದ ರಕ್ತದಾನಕ್ಕೆ ವಿನೂತನ ಪ್ರಯತ್ನ - ಮಂಗಳೂರು ಬ್ಲಡ್ ಡೋನರ್ಸ್ ತಂಡ
🎬 Watch Now: Feature Video

ಮಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನವೆಂದು ಕರೆಯಲ್ಪಡುವ ರಕ್ತದಾನ ಮಾಡಲು ಸಾಕಷ್ಟು ಮಂದಿ ಹಿಂಜರಿಯುತ್ತಾರೆ. ಆದ್ರೆ ಕರಾವಳಿಯ ಕೆಲವು ಉತ್ಸಾಹಿಗಳು ಒಂದು ತಂಡ ರಚಿಸಿಕೊಂಡು ಪ್ರಾಣ ಉಳಿಸಬಲ್ಲ ರಕ್ತದಾನ ಮಾಡುತ್ತಾರೆ. ಈ ಉತ್ಸಾಹಿ ವ್ಯಕ್ತಿಗಳ ತಂಡದವರು ಹಲವು ಮಂದಿಯ ಪ್ರಾಣ ಉಳಿಸಿದ್ದಾರೆ. ನಗರದಲ್ಲಿ ರಕ್ತದಾನ ಮಾಡಲೆಂದೇ ವಾಟ್ಸ್‌ಆ್ಯಪ್ ಗ್ರೂಪ್ ಕಾರ್ಯೋನ್ಮುಖವಾಗಿದೆ.