ಕೇರಳ ಸಮಾಜದವರಿಂದ ಓಣಂ ಹಬ್ಬ ಆಚರಣೆ - ಕೇರಳ ಸಮಾಜದಿಂದ ಓಣಂ ಹಬ್ಬ
🎬 Watch Now: Feature Video
ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ತನ್ವಿತ್ರಿಶ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜದಿಂದ ಓಣಂ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹೂವಿನಿಂದ ಬಿಡಿಸಿರುವ ರಂಗೋಲಿ ಆಕರ್ಷಕವಾಗಿತ್ತು. ಕೇರಳ ಶೈಲಿಯ ಭೋಜನಕೂಟ ಬಾಯಿ ಚಪ್ಪರಿಸುವಂತಿತ್ತು. ಮಧ್ಯಾಹ್ನ ಕೇರಳ ಸಮಾಜದವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆದವು. ಇದಾದ ಬಳಿಕ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ಕೊನೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.