ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ನೋಡುಗರನ್ನ ರಂಜಿಸಿದ ರಸಮಂಜರಿ ಕಾರ್ಯಕ್ರಮ - ಜಿಲ್ಲಾ ಉತ್ಸವದ ಎರಡನೇ ದಿನದಂದು ರಸಮಂಜರಿ ಕಾರ್ಯಕ್ರಮ
🎬 Watch Now: Feature Video
ಚಿಕ್ಕಮಗಳೂರು :20 ವರ್ಷಗಳ ನಂತರ ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿದ್ದು, ಎರಡನೇ ದಿನದ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ, ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಆಟದ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ವಿಶೇಷವಾಗಿ ಮೂಡಿಗೆರೆ ತಾಲೂಕಿನ ಶಾಸಕ ಎಂಪಿ ಕುಮಾರಸ್ವಾಮಿ ಅವರು ಜನಪದ ಗೀತೆಯನ್ನು ಹಾಡುವುದರ ಮೂಲಕ ಸಾರ್ವಜನಿಕರನ್ನು ರಂಜಿಸಿದರು. ಇಂದಿನ ಈ ಕಾರ್ಯ ಕ್ರಮದಲ್ಲಿ ರಾಜ್ಯದ 10 ಕ್ಕೂ ಹೆಚ್ಚು ಗಾಯಕರು ಆಗಮಿಸಿ ವಿವಿಧ ಸಿನಿಮಾದ ಹಾಡುಗಳನ್ನು ಹಾಡಿದರು.