ಚಿಕ್ಕಮಗಳೂರು: ಗಾಳಿ-ಮಳೆಗೆ ಕುಸಿದು ಬಿದ್ದ ಮನೆ, ವಾರ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು - ಚಿಕ್ಕಮಗಳೂರು ತಾಲೂಕಿನ ಕುಮಾರ್ ಗಿರಿ ಗ್ರಾಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8479023-600-8479023-1597840078207.jpg)
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ, ಗಾಳಿಗೆ ಮನೆಯೊಂದು ಕುಸಿದು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಕುಮಾರ್ ಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಳಿ ಮಳೆಗೆ ಸಂಪೂರ್ಣವಾಗಿ ಮನೆ ಕುಸಿದು ಬಿದ್ದಿದೆ. ಪ್ರಮೀಳಾ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮನೆ ಬಿದ್ದು, ಒಂದು ವಾರ ಕಳೆದಿದ್ದರೂ ಯಾವೋಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.