ಉತ್ತರ ಕರ್ನಾಟಕದ ನೆರವಿಗೆ ಕೈ ಜೋಡಿಸಿ: ನಟಿ ಸೋನುಗೌಡ ಮನವಿ - Acress Sonu Gowda
🎬 Watch Now: Feature Video

ಬೆಂಗಳೂರು: ಜಲಪ್ರಳಯಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕದ ಜನರ ಪರಿಸ್ಥಿತಿಯನ್ನು ನೆನೆದು ನಟಿ ಸೋನುಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿ, ಉತ್ತರ ಕರ್ನಾಟಕದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ನೆನೆದರೆ ಭಯವಾಗುತ್ತದೆ. ಜನರನ್ನು ಪರಿಸ್ಥಿತಿ ನೋಡುತ್ತಿದ್ದರೆ ಸಂಕಟವಾಗುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ಅವರ ನೆರವಿಗೆ ಹೋಗಬೇಕಿದೆ. ಈಗಾಗಲೇ ಸಾಕಷ್ಟು ಸಂಘ-ಸಂಸ್ಥೆಗಳು ನೆರವಿಗೆ ಧಾವಿಸಿದೆ. ಅಪ್ಪು ಸರ್ ಕೂಡ ಉತ್ತರ ಕರ್ನಾಟಕದ ನೆರವಿಗೆ ನಿಂತಿದ್ದಾರೆ. ನೀವು ಕೂಡ ಕೈಲಾದ ಸಹಾಯವನ್ನು ನೀಡಿ, ನಾನು ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.