ಮತ್ತೆ ಹೊಸ ವೇಷ ಹಾಕೋದಿಲ್ವಂತೆ 'ಕೌರವ'.. ಹಾಗಂದ್ರೇನು? - Disqualified mla BC Patil news,
🎬 Watch Now: Feature Video
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಮರಳಿ ಹೋಗುವ ಪ್ರಶ್ನೆನೇ ಇಲ್ಲ. ನಾನು ಯಾವ ಪಕ್ಷಕ್ಕೆ ಹೋಗಬೇಕು ಎನ್ನುವುದು ನ್ಯಾಯಾಲಯದ ತೀರ್ಪಿನ ಬಳಿಕ ನಿರ್ಧಾರ ಮಾಡುತ್ತೇನೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು 17 ಶಾಸಕರು ಒಂದು ಕಡೆ ಕುಳಿತು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿಗೆ ಮಾತನಾಡುವದಿಲ್ಲ. ನಾನು ಇವತ್ತು ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಬಂದಿಲ್ಲ. ಸಿಎಂ ಯಡಿಯೂರಪ್ಪರಿಗೆ ನನ್ನ ಕ್ಷೇತ್ರದ ನೂರು ಕೋಟಿ ಕಾಮಗಾರಿಗಳ ಉದ್ಘಾಟನೆಗೆ ಆಮಂತ್ರಣ ನೀಡಲು ಬಂದಿದ್ದೇನೆ ಎಂದರು.