ಕೊರೊನಾದಿಂದ ಹಾಸನ ಜಿಲ್ಲೆ ಸೇಫ್​​​​​​: 8 ಜನರ ವರದಿ ನೆಗಟಿವ್​​​ - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Apr 28, 2020, 1:57 PM IST

Updated : Apr 28, 2020, 3:05 PM IST

ಹಾಸನ: ಮಂಡ್ಯದ ನಾಗಮಂಗಲ ತಾಲೂಕಿನ ಡಿ‌ಸಾತೇನಹಳ್ಳಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ‌ ಬಂದಿದ್ದ 8 ಜನರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ಹಾಗೂ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರೀನ್ ಝೋನ್ ಜಿಲ್ಲೆ ಹಾಸನಕ್ಕೂ ಕೊರೊನಾ ವಕ್ಕರಿಸೋ ಆತಂಕ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 22 ಗಂಟೆ ಸೋಂಕಿತನ ಜೊತೆಯಲ್ಲಿ ಇದ್ದವರನ್ನು ಪರೀಕ್ಷೆಗೊಳಪಡಿಸಿದಾಗ ಎಲ್ಲರ ವರದಿ ನೆಗೆಟಿವ್ ಬಂದಿದೆ. ವರದಿ ನೆಗೆಟಿವ್ ಬಂದರೂ ಎಲ್ಲರನ್ನೂ ಕ್ವಾರಂಟೈನ್​ ಮಾಡಿರುವ ಜಿಲ್ಲಾಡಳಿತ, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ. ಜಿಲ್ಲೆಯ ಗಡಿಭಾಗ ಸಂಪೂರ್ಣ ಬಂದ್​ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated : Apr 28, 2020, 3:05 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.