624 ಅಂಕ ಪಡೆದ ನಿಹಾರಿಕಾ... ಸಾಧನೆ ಹಿಂದಿನ ಪ್ರಯತ್ನ ಬಿಚ್ಚಿಟ್ಟ ವಿದ್ಯಾರ್ಥಿನಿ - ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ನಿಹಾರಿಕಾ ಸಂತೋಷ್ ಕುಲಕರ್ಣಿ
🎬 Watch Now: Feature Video

ಬೆಂಗಳೂರು: ನಿತ್ಯ 10 ತಾಸುಗಳನ್ನು ಓದಿಗೆ ಮೀಸಲಿಡುತ್ತಿದ್ದೆ. ಪ್ರತಿ ಬಾರಿ ಪುಸ್ತಕ ಹಿಡಿದು ಫ್ರೆಶ್ ಮೈಂಡ್ನಿಂದ ಕುಳಿತು ಓದುತ್ತಿದ್ದೆ ಎಂದು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 625ಕ್ಕೆ 624 ಅಂಕ ಪಡೆದ ನಿಹಾರಿಕಾ ಸಂತೋಷ್ ಕುಲಕರ್ಣಿ ಹೇಳಿದರು. ಸದಾಶಿವ ನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಹಾರಿಕಾ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮನೆಯಲ್ಲಿ ಪೋಷಕರು, ಸಂಬಂಧಿಕರು, ಶಾಲೆಯಲ್ಲಿ ಶಿಕ್ಷಕರು, ಸ್ನೇಹಿತರ ಪ್ರೋತ್ಸಾಹದಿಂದ ಹೆಚ್ಚಿನ ಅಂಕ ಗಳಿಸಲು ಸಹಾಯಕವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.