ಕೋಳಿಸಾಕಾಣಿಕೆಗೆ ಬಂದಿದೆ ಅಚ್ಚುಕಟ್ಟಾದ ಗೂಡಿನ ವ್ಯವಸ್ಥೆ: ಇದರ ವಿಶೇಷತೆ ಏನು ಗೊತ್ತಾ? - ಕೋಳಿಮಾಂಸ ಉತ್ಪಾದನೆ ಪರಿಕರಣಗಳು
🎬 Watch Now: Feature Video

ಬೆಂಗಳೂರು: ಕೋಳಿಮಾಂಸ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನವಿದೆ. ರಾಜ್ಯದಲ್ಲೂ ರೈತರು ಮುಂಚೂಣಿಯಲ್ಲಿ ಈ ಕೃಷಿ ಉಪಕಸುಬಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕೃಷಿಮೇಳದಲ್ಲಿ ವಿವಿಧ ತಳಿಯ ಕೋಳಿಗಳ ಪ್ರದರ್ಶನ ಮಾಡಲಾಯಿತು. ಜೊತೆಗೆ ಕೋಳಿ ಸಾಕಾಣಿಕೆಯನ್ನು ಅತ್ಯಾಧುನಿಕವಾಗಿ, ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಸಾಕಲು ಬೇಕಾದ ಉಪಕರಣಗಳು, ಕೋಳಿಯ ಗೂಡುಗಳ ಪ್ರದರ್ಶನವನ್ನೂ ಮಾಡಲಾಯಿತು. ಒಂದು ಬಾರಿ 50 ಕೋಳಿಗಳನ್ನು ಸಾಕಬಹುದಾದ ಗೂಡನ್ನು ಅಜ್ರ ಪೊಲ್ಯೂಟರಿ ಇಕ್ಯುಪ್ ಮೆಂಟ್ ಕಂಪನಿಯು ಸಿದ್ಧಪಡಿಸಿದ್ದು, ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಸ್ಥೆಯ ಪರ್ಚೇಸಿಂಗ್ ಮ್ಯಾನೇಜರ್ ಜಿ.ವಿ.ರಾಜು ಗೂಡಿನ ಕುರಿತು ಮಾಹಿತಿ ನೀಡಿದರು.