2ನೇ ಬಾರಿಗೆ ಪ್ರಧಾನಿ ಮೋದಿ ಪ್ರಮಾಣವಚನ: ಉಚಿತ ಅನ್ನ ಪ್ರಸಾದ ವಿತರಣೆ ಮಾಡಿದ ಅಭಿಮಾನಿ - undefined
🎬 Watch Now: Feature Video
ವಿಜಯಪುರ: ಎರಡನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿಯೊಬ್ಬರು ನೂರಾರು ಜನಕ್ಕೆ ಉಚಿತ ಅನ್ನ ಪ್ರಸಾದ ವಿತರಣೆ ಮಾಡಿದ್ದಾರೆ. ನಗರದ ದರ್ಗಾ ಜೈನ್ ಮಂದಿರ ಬಳಿ ಇರುವ ಶರಣಬಸವೇಶ್ವರ ಹೊಟೇಲ್ ಮಾಲೀಕ ಶರಣಪ್ಪ ಚಿತ್ತಾಪುರ ಅವರು ರೈಸ್, ಸಾಂಬಾರ, ಚಹಾ ವಿತರಣೆ ಮಾಡಿ ವಿಶಿಷ್ಟವಾಗಿ ಅಭಿಮಾನ ಮೆರೆದಿದ್ದಾರೆ. ಶರಣಪ್ಪ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬಂತಹ ಕನಸು ಕಂಡಿದ್ದರಂತೆ. ಮೋದಿ ಪ್ರಧಾನಿ ಆದರೆ ಬಡವರಿಗೆ ಅನುಕೂಲ ಕಲ್ಪಿಸಲಿದ್ದು, ದೇಶ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆಯನ್ನು ಇವರು ಇಟ್ಟುಕೊಂಡಿದ್ದಾರೆ.