ನಾರಾಯಣಪುರ ಡ್ಯಾಂನಿಂದ ಹೊರ ಹರಿವು ಹೆಚ್ಚಳ: ಕೃಷ್ಣೆಯ ತೀರದಲ್ಲಿ ಮತ್ತೆ ಪ್ರವಾಹದ ಭೀತಿ - ಕೃಷ್ಣ ನದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4559262-thumbnail-3x2-megha.jpg)
ರಾಯಚೂರು: ನಾರಾಯಣಪುರ ಜಲಾಶಯದ 13 ಗೇಟ್ಗಳಿಂದ 1.15 ಲಕ್ಷ ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿಬಿಡಲಾಗಿದೆ. ಸತತ ಮೂರು ದಿನಗಳಿಂದ ನಾರಾಯಣಪುರ ಜಲಾಶಯಕ್ಕೆ 90 ಸಾವಿರ ಕ್ಯೂಸೆಕ್ ಒಳಹರವಿನ ಪ್ರಮಾಣವಿದೆ. ಹೀಗಾಗಿ ಜಲಾಶಯದ ಹೆಚ್ಚುವರಿ ನೀರನ್ನ ನದಿಗೆ ಹರಿಬಿಡಲಾಗಿದ್ದು, ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.