ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿದೆ ಅಸಮಧಾನವಾಗಿಲ್ಲ: ರಾಮದಾಸ್ - BJP MLA Ramdas
🎬 Watch Now: Feature Video

ಬೆಂಗಳೂರು: ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಾಗಿದೆ, ಆದರೆ ಯಾವುದೇ ರೀತಿಯ ಅಸಮಧಾನ ಇಲ್ಲ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮೈಸೂರು ಶಾಸಕ ರಾಮದಾಸ್ ಹೇಳಿದ್ದಾರೆ. ಈಟಿವಿ ಭಾರತ್ ಜೊತೆ ಮಾತನಾಡಿ, ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಳ್ಳುವವನು ನಾನಲ್ಲ. ಆದರೂ ಮೈಸೂರು ಭಾಗಕ್ಕೆ ಯಾಕೆ ಯಾರಿಗೂ ಸಚಿವ ಸ್ಥಾನ ಕೊಡಲಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ದಸರಾ ನಡೆಸಲು ನಾನು ಅಸಹಕಾರ ಕೊಡುತ್ತಿಲ್ಲ. ಹಾಗೆ ನೋಡಿದರೆ ದಸರಾ ಕಾರ್ಯಕ್ಕೆ ಚಾಲನೆ ನೀಡಿದವನೇ ನಾನು. ಸಹೋದರನೊಂದಿಗೆ ಪ್ರಯಾಣಿಸುವಾಗ ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಹಾಗಾಗಿ ದಸರಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಲಿಲ್ಲ.ಅದನ್ನೇ ಸಚಿವರು ತಪ್ಪಾಗಿ ಭಾವಿಸಿ ಅದ್ಯಾಕೆ ಅಸಮಾಧಾನ ಅಂತ ಹೇಳಿದ್ರೋ ಗೊತ್ತಿಲ್ಲ ಎಂದರು.