IND vs SA 1st T20 Highlights: ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗೆದ್ದು ಭಾರತ ಶುಭಾರಂಭ ಮಾಡಿದೆ.
ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸಂಜು ಸ್ಯಾಮ್ಸನ್ (107) ಅವರ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಹರಿಣ ಪಡೆ 141 ರನ್ ಗಳಿಸಲಷ್ಟೇ ಶಕ್ತವಾಯಿತು. 203 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಷದೀಪ್ ಓವತರ್ನಲ್ಲಿ ಮೊದಲ ಪೆಟ್ಟು ಬಿದ್ದಿತು. ಸತತ ಎರಡು ಬೌಂಡರಿಗಳನ್ನು ಬಾರಿಸಿದ ನಾಯಕ ಏಡನ್ ಮಾರ್ಕ್ರಾಮ್ ಔಟಾಗಿ ಪೆವಿಲಿಯನ್ ಸೇರಿದರು. ಮತ್ತೊಂದೆಡೆ ಟ್ರಿಸ್ಟಾನ್ ಸ್ಟಬ್ಸ್ 11 ರನ್ ಗಳಿಸಿ ನಿರ್ಗಮಿಸಿದರು.
For his sublime century in the 1st T20I, Sanju Samson receives the Player of the Match award 👏👏
— BCCI (@BCCI) November 8, 2024
Scorecard - https://t.co/0NYhIHEpq0#TeamIndia | #SAvIND | @IamSanjuSamson pic.twitter.com/Y6Xgh0YKXZ
ಉಳಿದಂತೆ ರಯಾನ್ 21 ರನ್ ಕೊಡುಗೆ ನೀಡಿದರೇ, ಕ್ಲಾಸೆನ್ 25 ಮತ್ತು ಡೇವಿಡ್ ಮಿಲ್ಲರ್ 18 ರನ್ ಗಳಿಸಲಷ್ಟೇ ಸೀಮಿತವಾದರು. ಈ ಇಬ್ಬರನ್ನು ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟುವಲ್ಲಿ ವರುಣ್ ಯಶಸ್ವಿಯಾದರು. ರವಿ ಬಿಷ್ಣೋಯ್ ಪ್ಯಾಟ್ರಿಕ್ ಮತ್ತು ಆಂಡಿಲ್ ಅವರನ್ನು ವಿಕೆಟ್ ಉರುಳಿಸಿದರು. ಇದರೊಂದಿಗೆ ಇಡೀ ತಂಡವನ್ನು ಭಾರತೀಯರು 141 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಬಿಷ್ಟೋಯಿ ತಲಾ 3 ವಿಕೆಟ್ ಕಿತ್ತರೆ, ಆವೇಶ್ ಖಾನ್ 2, ಅರ್ಷದೀಪ್ 1 ವಿಕೆಟ್ ಉರುಳಿಸಿದರು.
A clinical bowling display by #TeamIndia in Durban👌👌
— BCCI (@BCCI) November 8, 2024
South Africa all out for 141.
India win the 1st #SAvIND T20I by 61 runs and take a 1-0 lead in the series 👏👏
Scorecard - https://t.co/0NYhIHEpq0 pic.twitter.com/36MRC63RHD
ಸಂಜು ಸೆಂಚುರಿ: ಭಾರತದ ಪರ ಅಬ್ಬರಿಸಿದ ಸಂಜು 50 ಎಸೆತಗಳಲ್ಲಿ 107ರನ್ ಗಳಿಸಿದರು. ಇದರಲ್ಲಿ ಏಳು ಬೌಂಡರಿ ಮತ್ತು 10 ಸಿಕ್ಸರ್‌ಗಳು ಸೇರಿವೆ. ನಾಯಕ ಸೂರ್ಯಕುಮಾರ್ ಯಾದವ್ (21) ಅವರೊಂದಿಗೆ ಎರಡನೇ ವಿಕೆಟ್‌ಗೆ 66 ರನ್ ಮತ್ತು ತಿಲಕ್ ವರ್ಮಾ (33) ಅವರೊಂದಿಗೆ ಮೂರನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟ ಆಡಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಜಿ 37 ರನ್‌ಗಳಿಗೆ ಮೂರು ವಿಕೆಟ್ ಪಡೆದರು.
ಇದನ್ನೂ ಓದಿ: CSK ಹೀಗೆ ಮಾಡಿರುವುದು ದೊಡ್ಡ ತಪ್ಪು: ಫ್ರಾಂಚೈಸಿಗಿಂತ ದೇಶ ಮುಖ್ಯ - ರಾಬಿನ್ ಉತ್ತಪ್ಪ