ETV Bharat / state

ದುಡಿಯುವ ಗಂಡುಮಕ್ಕಳಿಗೆ ಶೇ.15% ಬಸ್​ ಪ್ರಯಾಣ ದರ ಏರಿಕೆ ಭಾರ: ಸಚಿವ ಶಿವಾನಂದ ಪಾಟೀಲ್ - SHIVANAND PATIL

ದುಡಿಯುವ ಗಂಡುಮಕ್ಕಳಿಗೆ ಶೇ.15% ಬಸ್​ ಪ್ರಯಾಣ ದರ ಏರಿಕೆ ಭಾರ ಆಗಬಹುದು. ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ನಮಗಿಂತ ದರ ಹೆಚ್ಚಿದೆ, ನಮ್ಮಲ್ಲಿ ಕಡಿಮೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಸಚಿವ ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್ (ETV Bharat)
author img

By ETV Bharat Karnataka Team

Published : Jan 5, 2025, 5:24 PM IST

Updated : Jan 5, 2025, 5:41 PM IST

ಹಾವೇರಿ: "ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬಸ್​ ಪ್ರಯಾಣ ದರ ನಮಗಿಂತ ದರ ಹೆಚ್ಚಿದೆ. ನಮ್ಮಲ್ಲಿ ಕಡಿಮೆ ಇದೆ" ಎಂದು ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಏನು ಕೆಲಸ ಹೇಳಿ?. ಅವರು ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ?. ಶಕ್ತಿ ಯೋಜನೆಯಲ್ಲಿ ಬಡ ಜನರನ್ನು ಓಡಾಡಿಸ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್‌ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ" ಎನ್ನುವ ಮೂಲಕ ಬಸ್​ ಟಿಕೆಟ್​ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಸಚಿವ ಶಿವಾನಂದ ಪಾಟೀಲ್ (ETV Bharat)

"ಹೆಣ್ಣು ಮಕ್ಕಳಿಗೆ, ಬಡವರಿಗೆ ಏನ್​ ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ. ದುಡಿಯುವ ಗಂಡುಮಕ್ಕಳಿಗೆ 15% ಬಸ್​ ಪ್ರಯಾಣ ದರ ಏರಿಕೆ ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ" ಎಂದು ಮಾಧ್ಯದಮವರಿಗೆ ಹೇಳಿದರು.

ವಿಧಾನ ಪರಿಷತ್​ ಸದಸ್ಯ ಸಿ. ಟಿ. ರವಿ ಪ್ರಕರಣದಲ್ಲಿ ಸಿಐಡಿಗೆ ಸ್ಥಳ ಮಹಜರು ಮಾಡಲು ಸದ್ಯ ಅವಕಾಶ ನೀಡುವುದಿಲ್ಲ ಎಂಬ ವಿಧಾನ ಪರಿಷತ್ ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್, "ಆ ಘಟನೆ ನಡೆದಾಗ ನಾನು ಸದನದಲ್ಲೇ ಇರಲಿಲ್ಲ" ಎಂದು ಹೇಳಿದರು.

ನಗರದ ಜನರಿಗೆ ನೀರಿನ ಬವಣೆ ತಪ್ಪಲಿದೆ : "ಹಾವೇರಿ ನಗರದ ಅಭಿವೃದ್ದಿಗೆ ನಗರೋತ್ಥಾನದಲ್ಲಿ ಸಾಕಷ್ಟು ಹಣ ಬಿಡುಗಡೆಯಾಗಿದೆ. ಹಾವೇರಿ ನಗರಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ಎಲ್ಲವೂ ಸೃಷ್ಟಿಯಾಗುತ್ತವೆ. ಹಾವೇರಿ ನಗರದ ಜನರ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಭವಿಷ್ಯದಲ್ಲಿ ಹಾವೇರಿ ನಗರಕ್ಕೆ ನೀರು ಕೊರತೆಯಾದರೆ ಅದಕ್ಕೆ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಈಜುಕೊಳ ಸೇರಿದಂತೆ ಜಿಲ್ಲಾ ಕ್ರೀಡಾಂಗಣದ ನಿರ್ವಹಣೆಗಾಗಿ ವಿಶೇಷ ಗಮನ ನೀಡಲಾಗುವುದು" ಎಂದರು.

"ಹಾವೇರಿ ಜಿಲ್ಲೆಯ ವರದಾ ನದಿಯ ಬಹುತೇಕ ಬ್ಯಾರೇಜ್‌ಗಳಿಗೆ ಕ್ರಸ್ಟಗೇಟ್ ಹಾಕಲಾಗಿದೆ.‌ ಆದರೆ ಅವುಗಳಲ್ಲಿ ನೀರು ಪೋಲಾಗುತ್ತಿದೆ ಎಂಬ ಆರೋಪ ಸುಳ್ಳು. ಈ ಬಗ್ಗೆ ಇನ್ನೊಮ್ಮೆ ಪರಿಶೀಲನೆ ಕೈಗೊಳ್ಳುತ್ತೇನೆ. ನೀರು ಪೋಲಾಗುತ್ತಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ" ಹೇಳಿದರು.

ಇದನ್ನೂ ಓದಿ: ಹರಿಶ್ಚಂದ್ರ ಹೋದ ಬಳಿಕ ಕುಮಾರಸ್ವಾಮಿನೇ ಸತ್ಯಹರಿಶ್ಚಂದ್ರ : ಸಚಿವ ಚಲುವರಾಯಸ್ವಾಮಿ

Last Updated : Jan 5, 2025, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.