ಬೆಂಕಿಯ ಕೆನ್ನಾಲಿಗೆಗೆ 100 ಎಕರೆಗೂ ಹೆಚ್ಚು ಕಬ್ಬು ಬೆಳೆ ಹಾನಿ - Belagavi Latest News Update
🎬 Watch Now: Feature Video
ಚಿಕ್ಕೋಡಿ: ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ 100 ಎಕರೆಗೂ ಹೆಚ್ಚು ಕಬ್ಬಿನ ಗದ್ದೆ ಬೆಂಕಿಗಾಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹತ್ತಾರು ರೈತರ ನೂರು ಎಕರೆಗೂ ಹೆಚ್ಚು ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆ ಬೆಂಕಿಗಾಹುತಿಯಾಗಿದ್ದು, ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.