ಹಡಿಲು ಗದ್ದೆ ಕೃಷಿ ಅಭಿಯಾನ: ನಾಟಿಯಲ್ಲಿ ಬ್ಯುಸಿಯಾದ್ರು ಉಡುಪಿ ಶಾಸಕ...! - ಉಡುಪಿ ಶಾಸಕ ರಘುಪತಿ ಭಟ್
🎬 Watch Now: Feature Video
ಉಡುಪಿ: ರಾಜ್ಯದಲ್ಲಿ ಕೋವಿಡ್-19 ಹಾವಳಿ ಹೆಚ್ಚಾಗ್ತಿದ್ದಂತೆ ಜಿಲ್ಲೆಯಲ್ಲೂ ಕೂಡಾ ಕೊರೊನಾ ಸಮುದಾಯಕ್ಕೆ ಹಬ್ಬಿದೆ. ಜಿಲ್ಲಾಡಳಿತ ಜೊತೆ ಶಾಸಕರು ಕೂಡಾ ಕೊರೊನಾ ನಿಯಂತ್ರಿಸುವಲ್ಲಿ ಹೆಣಗಾಡುತ್ತಿದ್ದಾರೆ. ಇದರ ಮಧ್ಯೆಯೇ ಉಡುಪಿ ಶಾಸಕ ರಘುಪತಿ ಭಟ್ ಭತ್ತ ನಾಟಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ನಿಟ್ಟೂರು ಪ್ರೌಢ ಶಾಲಾ ಸುವರ್ಣ ಪರ್ವದ ಅಂಗವಾಗಿ ಹಮ್ಮಿಕೊಂಡ ಹಡಿಲು ಗದ್ದೆ ಕೃಷಿ ಅಭಿಯಾನ ಪ್ರಯುಕ್ತ ಕರಂಬಳ್ಳಿಯ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ರಘುಪತಿ ಭಟ್ ತಮ್ಮ ಪುಟ್ಟ ಮಗನೊಂದಿಗೆ ಪಾಲ್ಗೊಂಡಿದ್ದರು. ಹಡಿಲು ಬಿದ್ದ ಭೂಮಿಯನ್ನು ಮಗ ರಿಯಾಂಶು ಜೊತೆ ಸೇರಿ ಸಾಲು ನಾಟಿಯನ್ನು ಮಾಡಿದ ಶಾಸಕರು ಈಟಿವಿ ಭಾರತ ಜೊತೆ ಕೃಷಿಯ ಮಹತ್ವದ ಕುರಿತು ಮಾತಾನಾಡಿದ್ರು.