ಇದಪ್ಪಾ ಸ್ಟೆಪ್ ಅಂದ್ರೆ: ಸುಗ್ಗಿ ಸಂಭ್ರಮದಲ್ಲಿ ಶಾಸಕ ಮಹೇಶ್ ಸಖತ್ ಡ್ಯಾನ್ಸ್! - Kollegala Mla Mahesh
🎬 Watch Now: Feature Video
ಚಾಮರಾಜನಗರ: ಹಾಡು-ನೃತ್ಯದ ಮೂಲಕ ಆಗಾಗ್ಗೆ ಜನರ ಮನರಂಜಿಸುವ ಕೊಳ್ಳೇಗಾಲ ಶಾಸಕ ಮಹೇಶ್ ಇಂದು ಕೂಡ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಕ್ರಾಂತಿ ಸಡಗರ ಹೆಚ್ಚಿಸಿದ ಘಟನೆ ತಾಲೂಕಿನ ಉಮ್ಮತ್ತೂತು ಗ್ರಾಮದಲ್ಲಿ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ವೇಳೆ ವಿದ್ಯಾರ್ಥಿಗಳು ಬಾರಿಸುತ್ತಿದ್ದ ತಮಟೆ, ನಗಾರಿ ಸದ್ದಿಗೆ ಕುಣಿದು ಯುವಕರು ನಾಚುವಂತೆ ಮಾಡಿದ್ದಾರೆ.