ಗೋಕಾಕ್​ನಲ್ಲಿ ಕಣ್ಣು ತೆರೆದನಾ ಶಿವಲಿಂಗ? ಪವಾಡವೆಂದು ದೇವಸ್ಥಾನಕ್ಕೆ ದೌಡಾಯಿಸಿದ ಭಕ್ತಗಣ! - ಗೋಕಾಕ್​ನಲ್ಲಿ ಶಿವಲಿಂಗ ಮೂರ್ತಿಯಲ್ಲಿ ತೆರೆದ ಕಣ್ಣುಗಳು,

🎬 Watch Now: Feature Video

thumbnail

By

Published : Feb 1, 2021, 10:29 AM IST

ಬೆಳಗಾವಿ: ಶಿವಲಿಂಗ ಮೂರ್ತಿಯ ಕಣ್ಣುಗಳೆರಡು ತೆರೆದಂತೆ ಗೋಚರಿಸುತ್ತಿದ್ದು, ಈ ವಿಸ್ಮಯ ನೋಡಲು ಭಕ್ತಗಣ ದೇವಸ್ಥಾನಕ್ಕೆ ದೌಡಾಯಿಸುತ್ತಿದೆ. ಜಿಲ್ಲೆಯ ಗೋಕಾಕ್​ ನಗರದ ಬಣಗಾರ ಗಲ್ಲಿಯಲ್ಲಿರುವ ಶಂಕರಲಿಂಗ ದೇವಸ್ಥಾನದ ಶಿವಲಿಂಗ ಮೂರ್ತಿ ಈ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನದ ಅರ್ಚಕರು ಶಿವಲಿಂಗ ಮೂರ್ತಿಯಲ್ಲಿ ಕಣ್ಣುಗಳು ಮೂಡಿವೆ ಎಂದು ಹೇಳಿದ್ದಾರಂತೆ. ಈ ಪವಾಡ ನೋಡಲು ಶಂಕರಲಿಂಗ ದೇವಸ್ಥಾನಕ್ಕೆ ಭಕ್ತರು ತಂಡೋಪ ತಂಡವಾಗಿ ಬರ್ತಿದ್ದಾರೆ. ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿವೆ ಎಂಬುದು ಅರ್ಚಕರು ಹಾಗೂ ಭಕ್ತರ ಮಾತಾಗಿದೆ. ಇದು ಶುಭ ಸಂದೇಶವಾಗಿದ್ದು, ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತವೆ. ಈ ಹಿಂದೆ 2004ರಲ್ಲಿಯೂ ಇದೇ ರೀತಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು ಎಂದು ಅರ್ಚಕ ಮಾಹಿತಿ ನೀಡಿದ್ದಾರೆ. ಈ ಪವಾಡ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ 'ಈಟಿವಿ ಭಾರತ' ಘಟನೆಯನ್ನು ಪುಷ್ಠಿಕರಿಸುವುದಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.