ಶ್ರೀನಿವಾಸ್ ಗೌಡರನ್ನು ಒಲಂಪಿಕ್ಸ್‌ಗೆ ಪರಿಗಣಿಸುವುದು ಅಥ್ಲೆಟಿಕ್ಸ್ ಅಸೋಸಿಯೇಷನ್ಗೆ ಬಿಟ್ಟ ವಿಚಾರ: ಸಿ.ಟಿ.ರವಿ - Sports Minister CT Ravi
🎬 Watch Now: Feature Video
ಶಿವಮೊಗ್ಗ: ಕಂಬಳ ಓಟಗಾರ ಶ್ರೀನಿವಾಸ್ ಗೌಡರನ್ನು ಒಲಂಪಿಕ್ಗೆ ಅಧಿಕೃತವಾಗಿ ಪರಿಗಣಿಸುವುದು ಅಥ್ಲೆಟಿಕ್ಸ್ ಅಸೋಸಿಯೇಷನ್ಗೆ ಬಿಟ್ಟ ವಿಚಾರ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಅವರು ಮೊದಲು ಪ್ರೀ ಕ್ವಾಲಿಫೈಡ್ ಟೆಸ್ಟ್ ನೀಡಿ ಪರಿಶೀಲನೆ ನಡೆಸುತ್ತಾರೆ. ಅದರಲ್ಲಿ ಅವರು ಪಾಸಾದರೆ ಮಾತ್ರ ಅವರಿಗೆ ಹೆಚ್ಚಿನ ಮಟ್ಟದ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಈಗಾಗಲೇ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಅವರ ಓಟದ ಸಾಮರ್ಥ್ಯದ ಬಗ್ಗೆ ಪರೀಕ್ಷೆ ಬಳಿಕವಷ್ಟೇ, ಭಾರತದ ಪರವಾಗಿ ಶ್ರೀನಿವಾಸ್ ಗೌಡರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ. ಸತ್ಯ ತಿಳಿದುಕೊಳ್ಳದೇ, ಸುದ್ಧಿಯ ಮೇಲೆ ಹೋಗುವುದು ಸರಿಯಲ್ಲ ಎಂದಿದ್ದಾರೆ.