ಬಿಜೆಪಿಗೆ ಯಾವ ಶಾಸಕರೂ ಬರುವ ಅವಶ್ಯಕತೆ ಇಲ್ಲ: ಸಚಿವ ಬಿ.ಸಿ. ಪಾಟೀಲ - ಬಿಜೆಪಿ
🎬 Watch Now: Feature Video
ಹಾವೇರಿ: ರಮೇಶ ಜಾರಕಿಹೊಳಿ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಕಾಂಗ್ರೆಸ್ಸಿನ ಐದು ಶಾಸಕರ ರಾಜೀನಾಮೆ ನೀಡಿಸಬಲ್ಲೆ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬಸರೀಕಟ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಯಾವ ಶಾಸಕರು ಬರುವ ಅವಶ್ಯಕತೆ ಇಲ್ಲ ಎಂದರು. ಬಿಜೆಪಿಯಲ್ಲಿ ಈಗಾಗಲೇ 119 ಶಾಸಕರಿದ್ದೇವೆ. ಮುಂದೆ ನಡೆಯುವ ಮೂರು ಉಪಚುನಾವಣೆಗಳಲ್ಲಿ ನಾವೇ ಜಯಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.