ಒಂದೇ ಸ್ಥಳದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಲಕ್ಷಾಂತರ ಚಿಟ್ಟೆಗಳು- ವಿಡಿಯೋ - ಅರೆನೂರು ಲಕ್ಷಾಂತರ ಚಿಟ್ಟೆಗಳ ಸುದ್ದಿ
🎬 Watch Now: Feature Video
ಚಿಕ್ಕಮಗಳೂರು: ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಹೋಗುವಾಗ ಅಥವಾ ತೋಟದಲ್ಲಿ ಇಲ್ಲವೇ ಜಮೀನುಗಳಲ್ಲಿ ಒಂದೆರೆಡು ಚಿಟ್ಟೆಗಳು ಹಾರಾಡೋದನ್ನು ನೋಡಿರುತ್ತೇವೆ. ಆದ್ರೆ ಒಟ್ಟೊಟ್ಟಿಗೆ ಲಕ್ಷಾಂತರ ಚಿಟ್ಟೆಗಳು ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ವಿರಳ. ಆದ್ರೆ ಚಿಕ್ಕಮಗಳೂರಿನ ಅರೆನೂರು ಗ್ರಾಮದ ವೆಂಕಟೇಶ್ ಗೌಡ ಅವರ ಮನೆಯ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಏಕಕಾಲದಲ್ಲಿ ಲಕ್ಷಾಂತರ ಚಿಟ್ಟೆಗಳು ಜೇನು ನೋಣಗಳಂತೆ ಮುತ್ತಿಕೊಂಡಿದ್ದು ಗೂಡು ಕಟ್ಟುವ ರೀತಿಯಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಂಡಿವೆ. ಇಷ್ಟೊಂದು ಸಂಖ್ಯೆಯ ಚಿಟ್ಟೆಗಳು ಒಂದೇ ಜಾಗದಲ್ಲಿ ಕಂಡುಬಂದಿರೋದು ವಿಶೇಷ.