ಏಷ್ಯಾದ ಅತಿದೊಡ್ಡ ಬುಡಕಟ್ಟು ಉತ್ಸವ 'ಮೇಡಾರಂ ಜಾತ್ರೆಗೆ' ಸಕಲ ಸಿದ್ಧತೆ - ಮೇಡಾರಂ ಜಾತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5948636-thumbnail-3x2-yugsdf.jpg)
ಹೈದರಾಬಾದ್ (ತೆಲಂಗಾಣ): ಇಲ್ಲಿನ ಮುಲುಗು ಜಿಲ್ಲೆಯ ಮೇಡಾರಂನಲ್ಲಿ ಫೆಬ್ರವರಿ 5 ರಿಂದ ಪ್ರಾರಂಭವಾಗಲಿರುವ ಸಮ್ಮಕ್ಕ-ಸರಳಮ್ಮ ಜಾತ್ರೆಗೆ ತೆಲಂಗಾಣ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿದೆ. ಜಾತ್ರಾ ಮಹೋತ್ಸವದಲ್ಲಿ 1 ಕೋಟಿಗೂ ಅಧಿಕ ಜನರು ಸೇರಲಿದ್ದಾರೆ ಎನ್ನಲಾಗಿದ್ದು, ಕುಂಭಮೇಳದ ನಂತರ ಮೇಡಾರಂ ಜಾತ್ರೆ ದೇಶದಲ್ಲಿ ಅತಿ ಹೆಚ್ಚು ಭಕ್ತರನ್ನು ಸೆಳೆದಿರುವ ಜಾತ್ರೆ ಎನ್ನಲಾಗಿದೆ. ಇನ್ನು ಏಷ್ಯಾದ ಅತಿದೊಡ್ಡ ಬುಡಕಟ್ಟು ಜನಾಂಗದ ಜಾತ್ರೆಯಂತಲೂ ಕರೆಯಲಾಗಿದೆ. ಅನ್ಯಾಯದ ವಿರುದ್ಧ ಹೋರಾಡಿದ ತಾಯಿ ಮತ್ತು ಮಗಳು ಸಮ್ಮಕ್ಕ, ಸರಲಮ್ಮರ ಹೋರಾಟವನ್ನು ಈ ಜಾತ್ರೆಯಲ್ಲಿ ಸ್ಮರಿಸಲಾಗುತ್ತದೆ ಎಂದು ಪ್ರತೀತಿ ಇದೆ. ಫೆ 5ರಿಂದ 8ರ ವರೆಗೆ ಈ ಜಾತ್ರೆ ನಡೆಯಲಿದೆ.
Last Updated : Feb 4, 2020, 12:35 PM IST