ಗದಗದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ 50ಕ್ಕೂ ಹೆಚ್ಚು ಬಣವೆಗಳು ಭಸ್ಮ - news kannada
🎬 Watch Now: Feature Video
ಶಾರ್ಟ್ ಸರ್ಕ್ಯೂಟ್ನಿಂದ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 50ಕ್ಕೂ ಹೆಚ್ಚು ಬಣವೆಗಳು ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಗನೂರು ಗ್ರಾಮದಲ್ಲಿ ನಡೆದಿದೆ. ಇನ್ನು ಗ್ರಾಮದಲ್ಲಿ ನೀರಿನ ಕೊರತೆ ಇದ್ದುದರಿಂದ ಬೆಂಕಿಯು ನಾಲ್ಕೈದು ಮನೆಗಳಿಗೂ ಆವರಿಸಿದೆ. ಇನ್ನು ಬೆಂಕಿಯ ಕೆನ್ನಾಲಿಗೆ ಮನೆಗೆ ನುಗ್ಗಿದ್ದರಿಂದ ಮನೆಯಲ್ಲಿನ ಸಿಲಿಂಡರ್ವೊಂದು ಸ್ಫೋಟವಾಗಿದೆ ಎನ್ನಲಾಗುತ್ತಿದೆ. ಭಾರೀ ಬಿರುಗಾಳಿ ಬೀಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.
Last Updated : Apr 27, 2019, 9:35 PM IST