ದೀಪಾವಳಿಗೆ ದುಬಾರಿಯಾದ ಚೆಂಡು ಹೂವಿನ ದರ! - Mexican marigold
🎬 Watch Now: Feature Video
ಮುದ್ದೇಬಿಹಾಳ: ಕೊರೊನಾ ಹಾವಳಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಈ ಸಲದ ದೀಪಾವಳಿ ರಂಗೇರಿದ್ದರೂ ಪ್ರಮುಖ ಆಕರ್ಷಣೆಯಾದ ಚೆಂಡು ಹೂವಿನ ದರ ಗಗನಕ್ಕೇರಿದೆ. ಪಟ್ಟಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೆಂಡು ಹೂವು ಆವಕವಾಗಿಲ್ಲ. ಈ ಹಿನ್ನೆಲೆ ಬಂದಷ್ಟೇ ಹೂವಿಗೆ ಬಂಗಾರದ ಬೆಲೆ ಬಂದಂತಾಗಿದೆ. ಕೆಜಿಯೊಂದಕ್ಕೆ 150-200 ರೂ.ನಂತೆ ಮಾರಾಟವಾಗುತ್ತಿದ್ದು, ಗ್ರಾಹಕರು ಹೂವಿನ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಬಾಳೆ ದಿಂಡು, ಕುಂಬಳಕಾಯಿ, ಹಸಿ ತೆಂಗು, ಚೆಂಡು ಹೂವಿನ ಗಿಡ, ಮಾವಿನ ಎಲೆ ಹಾಗೂ ಅಲಂಕಾರಿಕ ಸಾಮಗ್ರಿಗಳ ಖರೀದಿ ಸಹ ಜೋರಾಗಿದೆ.