ಕೊರೊನಾ ವಿರುದ್ಧ ಹೋರಾಡುವ ಯೋಧರಾಗಿ, ವಿಲನ್ಗಳಾಗಬೇಡಿ: ಸುಮಲತಾ ಅಂಬರೀಶ್ - ಕೊರೊನಾ ಕುರಿತು ಸುಮಲತಾ ಅಂಬರೀಶ್ ಜಾಗೃತಿ
🎬 Watch Now: Feature Video
ಜೀವವಿದ್ದರೆ ಎಷ್ಟು ಹಬ್ಬಬೇಕಾದರೂ ಆಚರಿಸಬಹುದು, ಆದರೆ ಹಬ್ಬವನ್ನು ಆಚರಿಸುವ ಸಮಯ ಇದಲ್ಲ. ಈ ಬಾರಿ ಯುಗಾದಿ ಹಬ್ಬವನ್ನು ಮನೆಯೊಳಗೆ ಇದ್ದು ನಿಮ್ಮ ಕುಟುಂಬದ ಜೊತೆ ಆಚರಿಸಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೊಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 31ರ ವರೆಗೂ ರಾಜ್ಯವನ್ನು ಲಾಕ್ಡೌನ್ ಮಾಡಿ ಸರ್ಕಾರ ಆದೇಶ ನೀಡಿದೆ. ಆದರೂ ಜನರು ಹಬ್ಬದ ಅಚರಣೆಗಾಗಿ ಮನೆಯಿಂದ ಹೊರಬಂದು ಹಬ್ಬದ ಸಾಮಗ್ರಿ ಖರೀದಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಸರ್ಕಾರದ ಅದೇಶ ಪಾಲನೆ ಮಾಡದೆ ಇದ್ರೆ ನಾವು ಉಳಿಯಲ್ಲ. ದಯವಿಟ್ಟು ಕೊರೊನಾ ವಿರುದ್ಧ ಹೋರಾಡುವ ಯೋಧರಾಗಿ, ವಿಲನ್ಗಳಾಗಬೇಡಿ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.