ಮಂಡ್ಯ: ಟೆನಿಸ್ ರಾಷ್ಟ್ರೀಯ ರ್ಯಾಂಕಿಂಗ್ನಲ್ಲಿ 31 ನೇ ಸ್ಥಾನ ಗಳಿಸಿದ 12ರ ಪೋರಿ - mandya latest news
🎬 Watch Now: Feature Video
ಮಂಡ್ಯ: ಸಕ್ಕರೆ ನಾಡು ಮಂಡ್ಯದ ಬಾಲಕಿ ಕಶ್ವಿಸುನಿಲ್ ಟೆನಿಸ್ ಕ್ರೀಡೆಯ ರಾಷ್ಟ್ರೀಯ ರ್ಯಾಂಕಿಂಗ್ನಲ್ಲಿ 31 ನೇ ಸ್ಥಾನ ಗಳಿಸಿದ್ದಾಳೆ ಎಂದು ಪಿ.ಇ.ಟಿ ಸ್ಫೋರ್ಟ್ಸ್ ಅಕಾಡೆಮಿಯ ಟ್ರಸ್ಟಿ ವಿಜಯಾನಂದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ನಾಡು ಮಂಡ್ಯದ ಪಿಇಟಿ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಾಲಕಿ ಟೆನಿಸ್ ರ್ಯಾಂಕಿಂಗ್ನಲ್ಲಿ 31ನೇ ಸ್ಥಾನ ಪಡೆದಿದ್ದಾಳೆ ಎಂದರು. 12 ವರ್ಷದ ಈ ಪೋರಿ ಪಿಇಟಿ ಟೆನಿಸ್ ತರಬೇತುದಾರ ಮಂಜುನಾಥ್ರಿಂದ ತರಬೇತಿ ಪಡೆದ್ದಾಳೆ. ಸದ್ಯ ತನ್ನ ಸಾಧನೆಗೆ ಪ್ರೋತ್ಸಾಹಿಸಿದ ಸಂಸ್ಥೆ ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾಳೆ. ಹ್ಯಾಟ್ರಿಕ್ ರ್ಯಾಂಕಿಂಗ್ನಲ್ಲಿ ಟೆನಿಸ್ ಆಟಗಾರ್ತಿ ಕಶ್ವಿ ಸುನಿಲ್ ಮಂಡ್ಯ ಜಿಲ್ಲೆಯ ಪ್ರಥಮ AITA ಚಾಂಪಿಯನ್ ಎಂಬ ಹೆಗ್ಗಳಿಕೆ ಪಾತ್ರಳಾಗಿದ್ದಾರೆ ಎಂದು ತಿಳಿಸಿದರು.