ಸ್ಯಾನಿಟೈಸರ್ನಲ್ಲಿ ಎಣ್ಣೆ ಇದೆ ಅಂತ ಕುಡಿದು ಆಸ್ಪತ್ರೆ ಸೇರಿದ ಭೂಪ - ಧಾರವಾಡ ಸ್ಯಾನಿಟೈಸರ್ ಸೇವನೆ
🎬 Watch Now: Feature Video
ಈಡಿ ದೇಶವೇ ಕೊರೊನಾ ವೈರಸ್ ಭೀತಿಯಿಂದ ಲಾಕ್ ಆಗಿದ್ದು, ಮದ್ಯ ಮಾರಾಟ ಸೇರಿ ವಾಣಿಜ್ಯ, ವ್ಯಾಪಾರಕ್ಕೆ ತಡೆ ಹಿಡಿಯಲಾಗಿದೆ. ಈ ನಿಟ್ಟಿನಲ್ಲಿ ಮದ್ಯ ಸಿಗದೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕಲಘಟಗಿಯಲ್ಲಿ ಕೆಲ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅಂತಹುದ್ಧೇ ಮತ್ತೊಂದು ಘಟನೆ ಧಾರವಾಡ ನಗರದಲ್ಲಿ ಬೆಳಕಿಗೆ ಬಂದಿದ್ದು, ನಗರದ ಗಾಂಧಿ ಚೌಕ್ ಬಳಿಯ ಬಾಲಾಜಿ ಓಣಿಯ ನಿವಾಸಿಯೊಬ್ಬ ಸ್ಯಾನಿಟೈಸರ್ ಕುಡಿದು ಆಸ್ಪತ್ರೆ ಸೇರಿದ್ದಾನೆ.