ಧುಮ್ಮಿಕ್ಕಿ ಹರಿಯುತ್ತಿರುವ ಮದಗದ ಕೆರೆ: ಜಲಧಾರೆಯ ದೃಶ್ಯ ವೈಭವ ನೋಡಿ
🎬 Watch Now: Feature Video
ಸುತ್ತಮುತ್ತಲು ಹಸಿರಿನ ಹೊದಿಕೆ ಹೊದ್ದಿರುವ ಪರ್ವತಗಳು. ಸಾವಿರಾರು ಎಕರೆ ವಿಸ್ತಿರ್ಣದಲ್ಲಿ ಹರಡಿರುವ ಜಲರಾಶಿ. ಜಲರಾಶಿಯಿಂದ ಮೈದಳೆಯುವ ಕುಮದ್ವತಿ ನದಿ. ನದಿಯಾಗುವ ಮುನ್ನ ನಿರ್ಮಾಣವಾಗುವ ಜಲಪಾತ. ಜಲಪಾತದ ಜಲಧಾರೆಯಿಂದ ಮೇಲೇಳುವ ನೀರಿನ ಸಿಂಚನ. ಎಂತವರನ್ನ ಕ್ಷಣಕಾಲ ಮೈಮರೆಯುವಂತೆ ಮಾಡುವ ಈ ನಯನಮನೋಹರ ದೃಶ್ಯ ಕಂಡುಬರೋದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರಿನಲ್ಲಿ. ಇಲ್ಲಿನ ಕೆಂಚಮ್ಮನ ಕೆರೆ ತುಂಬಿ ತುಳುಕುತ್ತಿದ್ದು, ಬೃಹತ್ ಜಲಧಾರೆಯೇ ಸೃಷ್ಟಿಯಾಗಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಜಲಧಾರೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ವಿಶಿಷ್ಟ ಜಲಪಾತದ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.