ಗ್ರೀನ್ ಝೋನ್ನಲ್ಲಿ ಹಾಸನ ಜಿಲ್ಲೆ:ಲಾಕ್‌ಡೌನ್ ಸಡಿಲಿಕೆಯಿಂದ ಬಾಗಿಲು ತೆರೆದ ಅಂಗಡಿಗಳು - ಹಾಸನದಲ್ಲಿ ಅಂಗಡಿಗಳು ಆರಂಭ
🎬 Watch Now: Feature Video
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ಹಾಸನ ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿವೆ. ಗ್ರೀನ್ ಝೋನ್ನಲ್ಲಿ ಗುರ್ತಿಸಿಕೊಂಡಿರುವ ಹಾಸನದಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ಎಲ್ಲಾ ತರಹದ ಅಂಗಡಿ-ಮುಂಗಟ್ಟುಗಳು ತೆರೆಯಲು ಅನುಮತಿ ದೊರೆತಿದೆ. ಹೀಗಾಗಿ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಕಳೆದ ಒಂದೂವರೆ ತಿಂಗಳಿನಿಂದ ಖಾಲಿ ಖಾಲಿ ಹೊಡೆಯುತ್ತಿದ್ದ ನಗರದ ರಸ್ತೆಗಳಲ್ಲಿ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಈ ಮಧ್ಯೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ದೃಶ್ಯ ಕೂಡ ಕಂಡು ಬಂತು.