ದುಬಾರೆ ಮಾವುತರು, ಕೂಲಿ ಕಾರ್ಮಿಕರಿಗೂ ತಟ್ಟಿದ ಲಾಕ್‌ಡೌನ್ ಬಿಸಿ..! - lockdown eefect on dubare elephant camp workers
🎬 Watch Now: Feature Video
ಮಹಾಮಾರಿ ಕೊರೊನಾ ವೈರಾಣು ಎಲ್ಲರನ್ನೂ ಜರ್ಜರಿತಗೊಳಿಸಿದೆ. ಅದರಲ್ಲೂ ಹೊತ್ತಿನ ಊಟಕ್ಕೆ ಕೂಲಿಯನ್ನೇ ಅವಲಂಬಿಸಿರುವ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ನೆಲೆಸಿರುವ ಸಾಕಷ್ಟು ಕಾವಾಡಿಗಳು ಮತ್ತು ಕೂಲಿ ಕೆಲಸವನ್ನೇ ನಂಬಿಕೊಂಡಿದ್ದವರ ಮೇಲೆ ಈ ಕೊರೊನಾ ಬರೆ ಎಳೆದಿದೆ. ಲಾಕ್‌ಡೌನ್ ಪರಿಣಾಮ ಕೆಲಸವೂ ಇಲ್ಲದೇ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಪರದಾಡುತ್ತಿದ್ದಾರೆ. ತಮಗೂ ಹಾಗೂ ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಕಾಡಾನೆಗಳಿಗೂ ಅಗತ್ಯ ಆಹಾರವಿಲ್ಲದೇ ಇವರ ಬದುಕು ದುಸ್ತರವಾಗಿದೆ.