ಚಿರತೆ ಸೆರೆ ಹಿಡಿದ ಮಂಡ್ಯದ ತಿರುಗನಹಳ್ಳಿ ಗ್ರಾಮಸ್ಥರು! - Leopard captured by villagers in Mandya
🎬 Watch Now: Feature Video
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಿರುಗನಹಳ್ಳಿ ಗ್ರಾಮಕ್ಕೆ ಬಂದು ಭೀತಿ ಹುಟ್ಟಿಸುತ್ತಿದ್ದ ಚಿರತೆಯನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಊರಿನ ಜನರು ಬಲೆ ಮತ್ತು ಕಟ್ಟಿಗೆಯ ಮೂಲಕ ಚಿರತೆಯನ್ನು ಜೀವಂತವಾಗಿ ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ. ವಶಕ್ಕೆ ಪಡೆದ ಚಿರತೆಯನ್ನು ಬಂಡೀಪುರದ ಕಾಡಿಗೆ ಬಿಡಲು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಚಿರತೆಯನ್ನು ಜೀವಂತವಾಗಿ ಹಿಡಿದ ಗ್ರಾಮಸ್ಥರ ಧೈರ್ಯಕ್ಕೆ ಅಧಿಕಾರಿಗಳ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.