ETV Bharat / sports

ಇಂಗ್ಲೆಂಡ್​ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಸಜ್ಜಾದ ಟೀಂ ಇಂಡಿಯಾ! - INDIA VS ENGLAND FIRST T20

ಭಾರತ ಮತ್ತು ಇಂಗ್ಲೆಂಡ್​ ನಡುವೆ ಜ.22 ರಿಂದ ಮೊದಲ ಟಿ20 ಪಂದ್ಯ ನಡೆಯಲಿದ್ದು, 13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ.

INDIA ENGLAND T20 HEAD TO HEAD  INDIA VS ENGLAND T20 SERIES  ಭಾರತ ಇಂಗ್ಲೆಂಡ್ ಟಿ20 ಸರಣಿ  INDIA VS ENGLAND ODI SERIES
England and india Team (IANS)
author img

By ETV Bharat Sports Team

Published : Jan 20, 2025, 4:51 PM IST

India vs England T20 Series: ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲು ಟೀಂ ಇಂಡಿಯಾ ಸಜ್ಜಾಗಿದೆ. ಇದೇ ತಿಂಗಳು ಅಂದರೆ ಜ.22 ರಂದು ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಇದಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್‌ ಆತಿಥ್ಯ ವಹಿಸಿಕೊಂಡಿದೆ. ಮೊದಲ ಪಂದ್ಯಕ್ಕಾಗಿ ಈಗಾಗಲೇ ಎರಡೂ ತಂಡಗಳು ಕೋಲ್ಕತ್ತಾ ತಲುಪಿವೆ. ಇಂಗ್ಲೆಂಡ್​ ತಂಡವನ್ನು ಜೋಸ್ ಬಟ್ಲರ್ ನಡೆಸಲಿದ್ದು, ಟೀಂ ಇಂಡಿಯಾದ ಜವಾಬ್ದಾರಿಯನ್ನು ಸೂರ್ಯಕುಮಾರ್ ಹೆಗಲಿಗೆ ಹೊರಿಸಲಾಗಿದೆ.

ಉಭಯ ತಂಡಗಳ ನಡವೆ ಈ ವರ್ಷದ ಮೊದಲ ಸರಣಿ ಇದಾಗಿದೆ. ಈವರೆಗೆ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದ್ದು ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೆಲುಗೈ ಸಾಧಿಸಿದ್ದರೆ, ಇಂಗ್ಲೆಂಡ್ 11 ಪಂದ್ಯಗಳಲ್ಲಿ ಸೋತು ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್​ ವಿರುದ್ಧ ಟಿ20 ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್​ ಲಿಸ್ಟ್​ಗಳಲ್ಲಿ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇವರು 21 ಪಂದ್ಯಗಳಲ್ಲಿ 39.93 ಸರಾಸರಿ ಮತ್ತು 648 ರನ್ ಕಲೆಹಾಕಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್ ವಿರುದ್ಧ 467 ರನ್ ಗಳಿಸಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಚಹಾಲ್ 11 ಪಂದ್ಯಗಳಲ್ಲಿ 16 ವಿಕೆಟ್ ಉರಳಿಸಿದ್ದರೆ, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ 14 ವಿಕೆಟ್ ಪಡೆದಿದ್ದಾರೆ.

ಆದ್ರೆ ಈ ಬಾರಿ ರೋಹಿತ್​ ಮತ್ತು ಕೊಹ್ಲಿ ಟಿ20 ಯಿಂದ ನಿವೃತ್ತಿ ಪಡೆದಿದ್ದು, ಈ ಇಬ್ಬರು ಆಟಗಾರರನ್ನು ಪಂದ್ಯದಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ನಾಯಕ ಜೋಸ್ ಬಟ್ಲರ್ ಮುಂಚೂಣಿಯಲ್ಲಿದ್ದಾರೆ. ಇವರು 22 ಇನ್ನಿಂಗ್ಸ್‌ಗಳಲ್ಲಿ 498 ರನ್ ಗಳಿಸಿದ್ದಾರೆ.

13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು; ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ಈ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹಿಂದೆ 29 ಅಕ್ಟೋಬರ್ 2011 ರಂದು ಉಭಯ ತಂಡಗಳು ನಡುವೆ ಏಕೈಕ ಟಿ20 ಪಂದ್ಯ ನಡೆದಿತ್ತು.

ಇದರಲ್ಲಿ ಭಾರತ 6 ವಿಕೆಟ್​ಗಳಿಂದ ಹೀನಾಯವಾಗಿ ಸೋಲನ್ನು ಕಂಡಿತ್ತು. ಇದೀಗ ಈ ಐತಿಹಾಸಿಕ ಮೈದಾನದಲ್ಲಿ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಧ್ರುವ್ ಜುರೆಲ್.

ಇದನ್ನೂ ಓದಿ: ಗೌತಮ್​ ಗಂಭೀರ್​ ಶಿಷ್ಯನಿಗೆ ಬಿಗ್​ ಜಾಕ್​ಪಾಟ್​​​: ಬಿಸಿಸಿಐನಿಂದ ಬಂಪರ್​ ಆಫರ್​​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.