ಮಾಸ್ಕ್ ಧರಿಸಿದವನಿಗೆ ರೋಗವಿಲ್ಲ: ಮಹಿಳಾ ಪೊಲೀಸರಿಂದಲೇ ಮುಖಗವಸು ತಯಾರಿಕೆ - ದೆಹಲಿಯಲ್ಲಿ ಪೊಲೀಸರಿಂದಲೇ ಮಾಸ್ಕ್ ತಯಾರಿಕೆ
🎬 Watch Now: Feature Video
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೇ ಮಾಸ್ಕ್ ತಯಾರಿಸಲು ಮುಂದಾಗಿದ್ದಾರೆ. ನಜಫ್ಗಢ್ ಪೊಲೀಸ್ ಠಾಣೆಯ ಸುಮಾರು ಆರು ಮಹಿಳಾ ಪೊಲೀಸರು ನಿರ್ಗತಿಕರಿಗೆ ಮಾಸ್ಕ್ ತಯಾರಿಸುತ್ತಿದ್ದಾರೆ. ಹೀಗೆ ತಯಾರಿಸಿದ ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕೊರೊನಾ ವೈರಸ್ ಹರಡುವಿಕೆ ದಿಢೀರ್ ಏರಿಕೆ ಕಂಡಿದ್ದರಿಂದ ಮಾಸ್ಕ್ಗಳ ಕೊರತೆ ಉಂಟಾಯ್ತು. ಈ ಹಿನ್ನೆಲೆ ಈ ಕೊರತೆ ಸರಿದೂಗಿಸಲು ಪೊಲೀಸರೇ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಈವರೆಗೆ 10 ಸಾವಿರಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸಿ ವಿತರಿಸಲಾಗಿದೆ. ತಮ್ಮ ಕರ್ತವ್ಯ ಮುಗಿಸಿದ ನಂತರ ಉಳಿದ ಸಮಯದಲ್ಲಿ ಮಹಿಳಾ ಪೊಲೀಸರು ಈ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ.
Last Updated : Apr 13, 2020, 7:56 PM IST