ಲ್ಯಾಬ್ ಟೆಕ್ನಿಷಿಯನ್ ಕೊರೊನಾ ವರದಿ ನೆಗೆಟಿವ್: ಪುಷ್ಪಾರ್ಚನೆ ಮೂಲಕ ಸ್ವಾಗತ
🎬 Watch Now: Feature Video
ಮುದ್ದೇಬಿಹಾಳ (ವಿಜಯಪುರ): 15 ದಿನಗಳ ಹಿಂದೆ ಕೊರೊನಾ ಲಕ್ಷಣ ಇರುವ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ, ಪಟ್ಟಣದ ಲ್ಯಾಬ್ ಟೆಕ್ನಿಷಿಯನ್ ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆಸ್ಪತ್ರೆಯಿಂದ ಅವರನ್ನು ಆ್ಯಂಬುಲೆನ್ಸ್ ಮೂಲಕ ಮನೆಗೆ ಕರೆದುಕೊಂಡು ಬಂದಾಗ ಓಣಿಯ ನಿವಾಸಿಗಳು ಹೂವಿನ ಹಾರ ಹಾಕಿ, ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು. ಲ್ಯಾಬ್ ಟೆಕ್ನಿಷಿಯನ್ ವರದಿ ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.