ಬಂದ್ ಕಾವು: ತಮ್ಮೂರಿಗೆ ತೆರಳಲು ಬಸ್ ಇಲ್ಲದೇ ಕೆಎಸ್ಆರ್ಟಿಸಿ ಚಾಲಕನ ಪರದಾಟ - ಕೆಎಸ್ಆರ್ಟಿಸಿ ನೌಕರರ ಮುಷ್ಕರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9862901-thumbnail-3x2-d.jpg)
ಬೆಳಗಾವಿ: ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ನಗರ ಕೇಂದ್ರ ಬಸ್ ನಿಲ್ದಾಣಲ್ಲಿ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಸ್ ಚಾಲಕರೊಬ್ಬರು ತಮ್ಮೂರಿಗೆ ತೆರಳಲು ಪರದಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸೋಮಲಿಂಗ ಎಂಬ ಕೆಎಸ್ಆರ್ಟಿಸಿ ಬಸ್ ಚಾಲಕ, ಇಂದು ಮನೆಯಲ್ಲಿರುವ ಕುಟುಂಬಸ್ಥರಿಗೆ ಅನಾರೋಗ್ಯ ಸಮಸ್ಯೆ ಉಂಟಾದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಊರಿಗೆ ತೆರಳುವುದು ಅನಿವಾರ್ಯವಾಗಿದೆ. ಆದರೆ ಮುಷ್ಕರದ ಹಿನ್ನೆಲೆ ಬಸ್ ಇಲ್ಲದೆಯೇ ಚಾಲಕ ಪರದಾಡುವಂತಾಗಿದೆ.