ವಾಹನ ಸವಾರರಿಗೆ ತೆಂಗಿನಕಾಯಿ ನೀಡಿ ಕಳುಹಿಸಿದ ಪೊಲೀಸರು - coconuts to motorists
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6630765-thumbnail-3x2-surya.jpg)
ಕೊರೊನಾ ಕಂಟ್ರೋಲ್ ಮಾಡಲು ಇಡೀ ದೇಶವೇ ಲಾಕ್ಡೌನ್ ಆಗಿದೆ. ಅನಗತ್ಯವಾಗಿ ಜನರು ಮನೆಯಿಂದ ಹೊರಬರುವುದನ್ನು ತಡೆಯಲು ಪೊಲೀಸರು ನಾನಾ ಪ್ರಯತ್ನಗಳನ್ನು ಮಾಡಿದರೂ ಜನರ ಅನಗತ್ಯ ಓಡಾಟ ನಿಲ್ಲುತ್ತಿಲ್ಲ. ಅದನ್ನು ನಿಲ್ಲಿಸಲು ಇಂದು ಕೊಪ್ಪಳ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ವಾಹನ ಸವಾರರಿಗೆ ತೆಂಗಿನಕಾಯಿ ನೀಡಿ ಅದನ್ನು ಒಡೆಯುವ ಮೂಲಕ ದಯಮಾಡಿ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡ್ತಿದ್ದಾರೆ. ಡಿವೈಎಸ್ಪಿ ಇದೇ ವೇಳೆ ಸ್ವತಃ ಹಲಗಿ (ತಮಟೆ) ಹೆಗಲಿಗೇರಿಸಿಕೊಂಡು ಬಾರಿಸುವ ಮೂಲಕವೂ ಅರಿವು ಮೂಡಿಸಿದರು.