ಕೊಪ್ಪಳದಲ್ಲಿ ವೇಗ ಪಡೆದುಕೊಳ್ತಿದೆ ಕೊರೊನಾ ವೈರಾಣುವಿನ ಅಬ್ಬರ

🎬 Watch Now: Feature Video

thumbnail

By

Published : Jul 4, 2020, 10:55 AM IST

ಜಿಲ್ಲೆಯಲ್ಲಿ ನಿನ್ನೆ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 105ಕ್ಕೇರಿದೆ. ಇಲ್ಲಿಯವರೆಗೆ 68 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, 35 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಒಟ್ಟು 4,178 ಜನರ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದ್ದು, ಇದರಲ್ಲಿ 51 ಜನರ ವರದಿ ಪಾಸಿಟಿವ್ ಬಂದಿದೆ ಹಾಗೂ ಇನ್ನೂ 484 ಜನರ ವರದಿ ಬರಬೇಕಿದೆ. ಇವುಗಳ ಜೊತೆಗೆ ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರು ಹಾಗೂ ಇತರೆ ವ್ಯಕ್ತಿಗಳು ಸೇರಿ ಜಿಲ್ಲೆಯಲ್ಲಿ ಈವರೆಗೆ (ಜುಲೈ 03ರ ಸಂಜೆವರೆಗೆ) ಒಟ್ಟು 10,964 ಜನರ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದ್ದು, ಈ ಪೈಕಿ 9,900 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 959 ಜನರ ವರದಿ ಬರಬೇಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಿವರ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.