ಕಾವೇರಿ ಕೂಗು ಅಭಿಯಾನಕ್ಕೆ ತಲಕಾವೇರಿಯಲ್ಲಿ ನಾಳೆ ಚಾಲನೆ - kodagu
🎬 Watch Now: Feature Video

ಕಾವೇರಿ ನದಿ ಸಂರಕ್ಷಣೆಗೆ ಈಶ ಫೌಂಡೇಶನ್ ಕಾವೇರಿ ಕೂಗು ಎಂಬ ಅಭಿಯಾನ ಆರಂಭಿಸಿದ್ದು, ಅದರ ಅಂಗವಾಗಿ ಫೌಂಡೇಶನ್ ಅಧ್ಯಕ್ಷ ಜಗ್ಗಿ ವಾಸುದೇವ್ ಇಂದು ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಿದ್ದಾರೆ. ನಾಳೆ ತಲಕಾವೇರಿಯಲ್ಲಿ ಅಭಿಯಾನದ ಅಂಗವಾಗಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಇದಕ್ಕೆ ಜಗ್ಗಿ ವಾಸುದೇವ್ ಚಾಲನೆ ನೀಡಲಿದ್ದಾರೆ. ಈ ಕಾವೇರಿ ಕೂಗು ಬೈಕ್ ರ‍್ಯಾಲಿ ಸಾಗುವ ಮಾರ್ಗ ಮಧ್ಯೆ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು. ಆಗಸ್ಟ್ 4 ರಂದು ಹುಣಸೂರು, 5 ರಂದು ಮೈಸೂರಿನ ಮಾನಸ ಗಂಗೋತ್ರಿಯ ಆ್ಯಂಫಿ ಥಿಯೇಟರ್, 6 ರಂದು ಮಂಡ್ಯ ಸುಭಾಷ್ ನಗರದ ಅಂಬೇಡ್ಕರ್ ಭವನದಲ್ಲಿ ಮತ್ತು 8 ರಂದು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪೊಂಪು ಹಾರ್‌ನಲ್ಲಿರುವ ತಿರುವರೂರ್ ಮೂಲಕ ಸಾಗಿ ಚೆನ್ನೈನಲ್ಲಿ ರ‍್ಯಾಲಿ ಮುಕ್ತಾಯವಾಗಲಿದೆ.