ಭಾನುವಾರ ಲಾಕ್ಡೌನ್ನಿಂದ ಕತ್ರಿಗುಪ್ಪೆ ಸಂಪೂರ್ಣ ಸ್ತಬ್ಧ - Sunday lockdown in Kathriguppe
🎬 Watch Now: Feature Video
ಬೆಂಗಳೂರು: ಭಾನುವಾರದ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಜನಪ್ರಿಯ ವಾಣಿಜ್ಯ ತಾಣ ಕತ್ರಿಗುಪ್ಪೆ ಮುಖ್ಯ ರಸ್ತೆ ಸಂಪೂರ್ಣ ಸ್ತಬ್ಧವಾಗಿದೆ. ಭಾನುವಾರದ ಕರ್ಫ್ಯೂ ಹಿನ್ನೆಲೆಯಲ್ಲಿ ಬಹುತೇಕ ದೇಶೀಯ ಹಾಗೂ ವಿದೇಶಿ ಮೂಲದ ವಾಣಿಜ್ಯ ಮಳಿಗೆಗಳು, ಕ್ರೀಡಾ ಸಲಕರಣೆಗಳ ಮಾರಾಟದ ಅಂಗಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟದ ಮಳಿಗೆಗಳು ಬಟ್ಟೆ ಅಂಗಡಿ ಹಾಗೂ ಇತರೆ ಮಳಿಗೆಗಳು ಬಾಗಿಲು ಹಾಕಿವೆ. ಬಿಗ್ ಬಜಾರ್ನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಮಳಿಗೆಯೊಂದು ತೆರೆದಿದ್ದು ಬೆರಳೆಣಿಕೆಯಷ್ಟು ಮಂದಿ ಭೇಟಿ ನೀಡುತ್ತಿರುವುದು ಗಮನಿಸಬಹುದಾಗಿದೆ.