ಗೋಡಂಬಿ-ಬಾದಾಮಿಯಲ್ಲಿ ಅಲಂಕೃತನಾದ ಆಂಜನೇಯ: ಹಾವೇರಿಯಲ್ಲಿ ಅದ್ಧೂರಿ ಕಾರ್ತಿಕೋತ್ಸವ

By

Published : Dec 19, 2020, 9:25 PM IST

thumbnail

ಹಾವೇರಿ ರೈಲು ನಿಲ್ದಾಣದ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಮ ಭಕ್ತನಿಗೆ ಗೋಡಂಬಿ ಮತ್ತು ಬಾದಾಮಿಯ ವಿಶೇಷ ಆಲಂಕಾರ ಮಾಡಲಾಗಿತ್ತು. ಹಯಗ್ರೀವ ಆಕಾರದಲ್ಲಿ ಪವನಸುತನನ್ನನ್ನು ಸಿಂಗರಿಸಲಾಗಿತ್ತು. ಸುಮಾರು ನಾಲ್ಕು ಕೆಜಿ ಗೋಡಂಬಿ ಮತ್ತು 1 ಕೆಜಿ ಬಾದಾಮಿಯಿಂದ ಪವನಸುತನನ್ನು ಅಲಂಕರಿಸಲಾಗಿತ್ತು. ಸಂಜೆಯಾಗುತ್ತಿದ್ದಂತೆ ಭಕ್ತರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಮುಂಜಾನೆಯಿಂದ ಸಂಜೆವರೆಗೆ ಭಕ್ತರ ದಂಡು ಹರಿದುಬಂತು. ಕಾರ್ತಿಕೋತ್ಸವದ ಅಂಗವಾಗಿ ರಾಮಭಕ್ತ ಹನುಮನಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.