ಮಲೆ ಮಹದೇಶ್ವರನಿಗೆ 30 ದಿನದಲ್ಲಿ ಹರಿದು ಬಂತು 2 ಕೋಟಿ ರೂ: ಹುಂಡಿಯಲ್ಲಿದ್ದವು 6 ವಿದೇಶಿ ಕರೆನ್ಸಿ - Male Mahadeshwara Hundi Counting - MALE MAHADESHWARA HUNDI COUNTING
🎬 Watch Now: Feature Video
Published : Jun 29, 2024, 2:26 PM IST
ಚಾಮರಾಜನಗರ: ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳ ಅವಧಿಯಲ್ಲಿ 2.20 ಕೋಟಿ ರೂ. ಸಂಗ್ರಹವಾಗಿದೆ ಎಂದು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಸಾಲೂರು ಬೃಹನ್ ಮಠದ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಿ, ಸಂಜೆ 7ಕ್ಕೆ ಮುಕ್ತಾಯವಾಯಿತು.
ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,20,97,533 ನಗದು 106 ಗ್ರಾಂ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹುಂಡಿಗೆ ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಇದಲ್ಲದೇ ಇ-ಹುಂಡಿಯಿಂದ 3,38,830 ರೂ. ಹಣ ಬಂದಿದ್ದು, ವಿದೇಶಿ ಕರೆನ್ಸಿಗಳಾದ ಡಾಲರ್ 3, ಅರಬ್ 1, ನೇಪಾಳ 1, ಉಮನ್ ದೇಶದ 1 ಕರೆನ್ಸಿ ನೋಟು ಹುಂಡಿಯಲ್ಲಿ ಸಿಕ್ಕಿದೆ. ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 19 ನೋಟುಗಳನ್ನೂ ಹಾಕಿದ್ದಾರೆ ಎಂದು ರಘು ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ನೋಡಿ: ನಂಜುಂಡೇಶ್ವರನ ಹುಂಡಿಗೆ ಹರಿದು ಬಂತು ₹1.69 ಕೋಟಿ ನಗದು: ಚಿನ್ನಾಭರಣ, ವಿದೇಶಿ ಕರೆನ್ಸಿಗಳೂ ಸಂಗ್ರಹ - Nanjundeshwar hundi