ರಾಜ್ಯದ ಹಿರಿಯ ಕ್ರಿಕೆಟ್ ಅಭಿಮಾನಿಗಳಿಂದ ಟೀಂ ಇಂಡಿಯಾಗೆ ಸಲಹೆ ಮತ್ತು ಶುಭ ಹಾರೈಕೆ - T20 WORLD CUP 2024
🎬 Watch Now: Feature Video
Published : Jun 29, 2024, 3:35 PM IST
|Updated : Jun 29, 2024, 5:55 PM IST
ಬೆಂಗಳೂರು: ಟಿ-20 ವಿಶ್ವಕಪ್ನಲ್ಲಿ ಅಜೇಯವಾಗಿ ಫೈನಲ್ ಹಂತಕ್ಕೆ ತಲುಪಿರುವ ಭಾರತಕ್ಕೆ ರಾಜ್ಯದ ಹಿರಿಯ ಕ್ರಿಕೆಟ್ ಅಭಿಮಾನಿಗಳು ಗೆದ್ದು ಬಾ ಭಾರತ ಎಂದು ಶುಭ ಕೋರಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಭಾರತದ ಧ್ವಜ ಹಿಡಿದು ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ.
ಮಂಗಳೂರಿನ ಹಿರಿಯ ಕ್ರಿಕೆಟ್ ಅಭಿಮಾನಿ ಜೆರಾಲ್ಡ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನನ್ನ ದೇಹದ ಪ್ರತಿ ನರದಲ್ಲೂ ಕ್ರಿಕೆಟ್ ಬಗ್ಗೆ ಅಭಿಮಾನ ಇದೆ ಎಂದು ಹೇಳುತ್ತೇನೆ. ಮತ್ತೆ ನಮ್ಮ ದೇಶಕ್ಕೆ ಕೀರ್ತಿ ತರಲು ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ತೋರಿಸಲಿ ಎಂದು ಹಾರೈಸಿದ್ದಾರೆ.
ಮೈಸೂರಿನಿಂದ ಶುಭ ಕೋರಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಂಪೈರ್ ಎಂ ಆರ್ ಸುರೇಶ್, ಟೀಂ ಇಂಡಿಯಾ ಅತ್ಯುತ್ತಮ ಫಾರ್ಮನಲ್ಲಿದೆ. ಅದರಲ್ಲೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಉಳಿದಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾಗಿಂತಲು ಭಾರತ ಬಲಿಷ್ಠವಾಗಿದೆ. ಹಾಗಾಗಿ ಈ ಬಾರಿ ಭಾರತ ಕಪ್ನೊಂದಿಗೆ ಮರಳಲಿ ಎಂದು ಹಾರೈಸಿದರು.
ಹುಬ್ಬಳ್ಳಿಯ ಕ್ರಿಕೆಟ್ ಅಭಿಮಾನಿ ಸುರೇಶ್ ಶೇಜವಾಡಕರ್ ಮಾತನಾಡಿ, ಭಾರತವು ಗೆಲ್ಲುವ ಫೆವರೆಟ್ ತಂಡವಾಗಿದೆ. ದಕ್ಷಿಣ ಆಫ್ರಿಕಾ ತಂಡ ಸಹ ಉತ್ತಮವಾಗಿದೆ. ಆದ್ರೆ ನಮ್ಮ ಭಾರತ ತಂಡ ಜಯ ಸಾಧಿಸಲಿ ಎಂದು ಹಾರೈಸುತ್ತೇವೆ ಎಂದರು.
ಚಾಮರಾಜನಗರದ ಪ್ರಾಂಶುಪಾಲರಾದ ಮರಿಸ್ವಾಮಿ ಈಟಿವಿ ಭಾರತದೊಂದಿಗೆ ಮಾತನಾಡಿ, 10 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ಫೈನಲ್ಗೆ ಪ್ರವೇಶ ಮಾಡಿದೆ. ಈ ಬಾರಿ ಭಾರತ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಕಪ್ ಗೆಲ್ಲಲಿದೆ. ವಿಶ್ವಕಪ್ ಗೆದ್ದು ಬಾ ಇಂಡಿಯಾ ಎಂದು ಶುಭ ಕೋರಿದರು.