ETV Bharat / business

ಭಯ ಬೇಡ.. 'ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಬದಲಾಗಿಲ್ಲ': ಯಾವುದಕ್ಕೆ ಎಷ್ಟು ಬಡ್ಡಿ, ಇಲ್ಲಿದೆ ಡಿಟೇಲ್ಸ್​! - SMALL SAVINGS SCHEME INTEREST RATES - SMALL SAVINGS SCHEME INTEREST RATES

Small savings scheme interest rates; 2024-25 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಬದಲಾಗದೇ ಮುಂದುವರಿಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ. ಅಂದರೆ ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಎನ್‌ಎಸ್‌ಸಿ, ಬಡ್ಡಿ ದರಗಳು ಹಾಗೆಯೇ ಇರುತ್ತವೆ. ಈ ಬಗೆಗಿನ ಸಂಪೂರ್ಣ ವಿವರಗಳು ನಿಮಗಾಗಿ.

interest-rates-on-small-savings-schemes-remain-unchanged-for-second-quarter
ಭಯ ಬೇಡ.. 'ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಬದಲಾಗಿಲ್ಲ': ಯಾವುದಕ್ಕೆ ಎಷ್ಟು ಬಡ್ಡಿ, ಇಲ್ಲಿದೆ ಡಿಟೇಲ್ಸ್​! (ETV Bharat)
author img

By ETV Bharat Karnataka Team

Published : Jun 29, 2024, 7:35 AM IST

Small Savings Schemes Interest Rates In 2024 ಪ್ರಸಕ್ತ ಹಣಕಾಸು ವರ್ಷದ (2024-25) ಎರಡನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಯಥಾರೀತಿಯಲ್ಲೇ ಮುಂದುವರಿಸಲಾಗುವುದು ಎಂದು ಹಣಕಾಸು ಇಲಾಖೆ ಘೋಷಿಸಿದೆ. ಅಂದರೆ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಹಳೆಯ ಬಡ್ಡಿ ದರಗಳು ಮುಂದುವರಿಯಲಿವೆ.

ಪ್ರಸ್ತುತ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇ 8.2ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ. ಬಡ್ಡಿ ದರವು ಮೂರು ವರ್ಷಗಳ ಅವಧಿಯ ಠೇವಣಿ ಮೇಲೆ ಶೇ 7.1 , ಸಾರ್ವಜನಿಕ ಭವಿಷ್ಯ ನಿಧಿ (PPF) ಮೇಲೆ ಶೇ 7.1, ಉಳಿತಾಯ ಠೇವಣಿ ಮೇಲೆ ಶೇ 4.0 ರಷ್ಟು ಮತ್ತು ಕಿಸಾನ್ ವಿಕಾಸ್ ಪತ್ರದ ಮೇಲೆ ಶೇ 7.5ರಷ್ಟು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮೇಲೆ ಶೇ 7.7 ಮತ್ತು ಮಾಸಿಕ ಆದಾಯ ಯೋಜನೆಯಲ್ಲಿಶೇ 7.4ರ ಬಡ್ಡಿ ನಿಗದಿ ಮಾಡಲಾಗಿದೆ. ಆದರೆ, ಈ ಬಡ್ಡಿದರಗಳು ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ತ್ರೈಮಾಸಿಕದವರೆಗೆ ಒಂದೇ ರೀತಿ ಇರುತ್ತವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2020 ರ ಏಪ್ರಿಲ್-ಜೂನ್ ತ್ರೈಮಾಸಿಕದಿಂದ ಇಲ್ಲಿಯವರೆಗೆ PPF ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರ್ಕಾರವು ಈ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸುತ್ತದೆ.

ಸಣ್ಣ ಮೊತ್ತದ ಹಣ ಹೂಡಿಕೆ ಇವು ಉತ್ತಮ ಮಾರ್ಗಗಳಾಗಿವೆ! ಸಾರ್ವಜನಿಕ ಭವಿಷ್ಯ ನಿಧಿ (PPF) : ಇದೊಂದು ಜನಪ್ರಿಯ ಯೋಜನೆಯಾಗಿದೆ. ಪ್ರಸ್ತುತ ಬಡ್ಡಿದರಗಳು ಶೇ 7.1 ಬಡ್ಡಿಯನ್ನು ವಾರ್ಷಿಕವಾಗಿ ನೀಡುತ್ತವೆ. ಈ ಯೋಜನೆಯಲ್ಲಿ ಮಾಡಿದ ಉಳಿತಾಯ ಹಾಗೂ ಅದರಲ್ಲಿ ಗಳಿಸುವ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ): ಇದು ಸರ್ಕಾರ ನೀಡಿದ ಬಾಂಡ್ ಆಗಿದೆ. ಶೇ 7.7 ರಷ್ಟು ಬಡ್ಡಿ ನೀಡುತ್ತದೆ. ಇದನ್ನು ಹೂಡಿಕೆದಾರರಿಗೆ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಯೋಜನೆಯು ಐದು ವರ್ಷಗಳ ಅವಧಿಗೆ ಇರುತ್ತದೆ. ಇದನ್ನು ಪೋಸ್ಟ್ ಆಫೀಸ್ ಮೂಲಕ ಹೂಡಿಕೆ ಮಾಡಬಹುದಾಗಿದೆ.

ಕಿಸಾನ್ ವಿಕಾಸ್ ಪತ್ರ: ಕಿಸಾನ್ ವಿಕಾಸ್ ಪತ್ರವು ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತದೆ. ವಾರ್ಷಿಕವಾಗಿ ಸಂಯೋಜಿಸಲಾಗಿದೆ. ಮೆಚುರಿಟಿ ಸಮಯ 124 ತಿಂಗಳುಗಳು. ಅಂಚೆ ಕಚೇರಿಗಳು ಇದನ್ನು ಒದಗಿಸುತ್ತವೆ. ಹೂಡಿಕೆಯ ಮೇಲೆ ಮತ್ತು ಅದೇ ರೀತಿ ಬಡ್ಡಿಯ ಮೇಲೆ ಯಾವುದೇ ತೆರಿಗೆ ರಿಯಾಯಿತಿ ಇಲ್ಲ.

ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ): ಇದು ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆ. ಇದಕ್ಕೆ ಸಿಗುವ ಬಡ್ಡಿ ಶೇ.8.2. ಅಸಲು ಮೊತ್ತದ ಮೇಲೆ ವಾರ್ಷಿಕವಾಗಿ ಬಡ್ಡಿ ಸೇರುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಹೆಣ್ಣು ಮಗುವಿನ ಪೋಷಕರು ಮತ್ತು ಕಾನೂನು ಪಾಲಕರು ಅಂಚೆ ಕಚೇರಿಗಳು ಅಥವಾ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ಈ ಖಾತೆಯು ಹೆಣ್ಣುಮಗು 21 ವರ್ಷಗಳನ್ನು ತಲುಪಿದ ನಂತರ ಅಥವಾ ಮದುವೆಯಾದ ನಂತರ (18 ವರ್ಷವನ್ನು ತಲುಪಿದ ನಂತರ) ಪಕ್ವವಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಖಾತೆ (SCSS): ಈ ಯೋಜನೆಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ಪರಿಚಯಿಸಲಾಗಿದೆ. ಇದರ ಅವಧಿ 5 ವರ್ಷಗಳು. ಈ ಯೋಜನೆ ಅಡಿ ಶೇ 8.2 ರಷ್ಟು ಬಡ್ಡಿ ನೀಡಲಾಗುತ್ತದೆ. ಇದನ್ನು ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಐದು ವರ್ಷಗಳ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಮಾಸಿಕ ರೂಪದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಪ್ರಸ್ತುತ ಬಡ್ಡಿ ಶೇ.7.4ರಷ್ಟಿದೆ.

ಇವುಗಳನ್ನು ಒಮ್ಮೆ ಗಮನಿಸಿ: IRCTC ಸೂಪರ್​ ಟೂರ್​ ಪ್ಯಾಕೇಜ್: ಕೈಗೆಟುಕುವ ದರದಲ್ಲಿ ಕೈಗೊಳ್ಳಿ ನೇಪಾಳ ಪ್ರವಾಸ! - IRCTC Hyderabad Nepal Tour

ಇಳಿಕೆಯತ್ತ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 210 & ನಿಫ್ಟಿ 33 ಅಂಕ ಕುಸಿತ - Stock Market Closing

ಐಟಿ ರಿಟರ್ನ್ಸ್​​ ಸಲ್ಲಿಸುವ ಗಡುವು ಸಮೀಪಿಸುತ್ತಿದೆ, ಈ ಸಂಗತಿಗಳು ನಿಮ್ಮ ನೆನಪಿನಲ್ಲಿರಲಿ! - IT Returns

ETV Bharat Logo

Copyright © 2024 Ushodaya Enterprises Pvt. Ltd., All Rights Reserved.