ವೈದ್ಯರು ಜೀವ ಉಳಿಸುವ ದೇವರು ಎಂದೇ ಎಲ್ಲರೂ ನಂಬುತ್ತಾರೆ. ಹಾಗಾಗಿಯೇ ಅವರನ್ನು ವೈದ್ಯೋ ನಾರಾಯಣ ಹರಿ ಅಂತಾರೆ ಕೂಡಾ. ವೈದ್ಯರು ಎಷ್ಟೇ ಪರಿಣತರಾದರೂ ಕೆಲ ವಿಷಯಗಳನ್ನು ಹೇಳದೇ ಇರಬಹುದು. ಸಮತೋಲಿತ ಜೀವನವನ್ನು ನಡೆಸುವುದು, ಒತ್ತಡವನ್ನು ನಿವಾರಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ವೈದ್ಯಕೀಯ ಚಿಕಿತ್ಸೆಯನ್ನು ಮೀರಿದೆ ಎಂಬುದು ಗೊತ್ತಿರಲಿ. ಇದು ರೋಗಿಗಳ ಆರೈಕೆ, ಆಹಾರ ಪದ್ಧತಿ ಮತ್ತು ಭಾವನಾತ್ಮಕ ಯೋಗಕ್ಷೇಮದ ಸಲಹೆಗಳನ್ನು ಒಳಗೊಂಡಿದೆ. ಪ್ರಸಿದ್ಧ ಆಯುರ್ವೇದ ತಜ್ಞರು ಮತ್ತು ಕರುಳಿನ ತಜ್ಞ ಡಾ.ಡಿಂಪಲ್ ಜಂಗ್ಡಾ ಅವರು ವೈದ್ಯರು ಹೇಳದ ಕೆಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ.
1. ಆಹಾರ ಕ್ರಮ ಸರಿಯಾಗಿದ್ದರೆ ಔಷಧವೇ ಬೇಕಾಗಿಲ್ಲ: ಈಗಿನ ಜೀವನಶೈಲಿಯು ಥೈರಾಯ್ಡ್, ಮಧುಮೇಹ, ಪಿಸಿಓಎಸ್, ಸ್ತ್ರೀ ಜನನಾಂಗದ ತೊಂದರೆಗಳು, ಜಠರಗರುಳಿನ ಅಸ್ವಸ್ಥತೆಗಳಂತಹ ದೀರ್ಘಕಾಲದ ಕಾಯಿಲೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ಗುಣಪಡಿಸಲು ಔಷಧಗಳು ಸಾಕಾಗುವುದಿಲ್ಲ. ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಅಂಶಗಳು ಎಂದರೆ, ಔಷಧಿಯನ್ನು ತೆಗೆದುಕೊಂಡಾಗ, ಸಮಸ್ಯೆಯುಗಮನಕ್ಕೆ ಬರುವುದಿಲ್ಲ. ಆದರೆ ಬಳಕೆಯನ್ನು ನಿಲ್ಲಿಸಿದ ನಂತರ ಅದು ಹಿಂತಿರುಗಿ ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ.
ಅದಕ್ಕಾಗಿಯೇ ರೋಗದ ಬೇರುಗಳನ್ನು ಮೂಲ ಹುಡುಕಿ ಕಿತ್ತುಹಾಕಬೇಕು. ಇದರರ್ಥ ನೀವು ನಿಮ್ಮ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಬೇಕು. ರೋಗಗಳನ್ನು ಹೆಚ್ಚಿಸುವ ಆಹಾರಗಳನ್ನು ತ್ಯಜಿಸಬೇಕು. ಇದಕ್ಕಾಗಿ ನೀವು ಪೌಷ್ಟಿಕತಜ್ಞರು, ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶದಲ್ಲಿ ಪರಿಣತಿ ಹೊಂದಿರುವ ಆಯುರ್ವೇದ ಅಥವಾ ಪ್ರಕೃತಿಚಿಕಿತ್ಸಕ ಆರೋಗ್ಯ ತರಬೇತುದಾರರನ್ನು ಸಂಪರ್ಕಿಸಬಹುದು. ಅವರ ಸೂಚನೆಗಳ ಪ್ರಕಾರ ಕಟ್ಟುನಿಟ್ಟಾದ ಆಹಾರ ಯೋಜನೆ ರೂಪಿಸಿಕೊಳ್ಳಿ. ಆಗ ನೋಡಿ ನಿಮ್ಮ ಆರೋಗ್ಯ ಎಷ್ಟು ಚಂದವಾಗಿರುತ್ತೆ ಎಂದು.
2. ಒಬ್ಬರಿಗೆ ಪೋಷಣೆ ನೀಡುವುದು ಇನ್ನೊಬ್ಬರಿಗೂ ವಿಷವೂ ಆಗಬಹುದು: ಯಾವುದೇ ಎರಡು ಆಹಾರಗಳು ಸಮಾನವಾಗಿರಲ್ಲ. ಮಾನವರಲ್ಲಿ ಸಾಮಾನ್ಯವಾಗಿ ಮೂರು ವಿಭಿನ್ನ ದೇಹ ಪ್ರಕಾರಗಳಿವೆ. ಎಕ್ಟೋಮಾರ್ಫ್ (ವಾತ ಪ್ರಕೃತಿ), ಎಂಡೋಮಾರ್ಫ್ (ಕಫ ಪ್ರಕೃತಿ), ಮೆಸೊಮಾರ್ಫ್ (ಪಿತ್ತ ಪ್ರಕೃತಿ). ಎಂಡೋಮಾರ್ಫ್ ದೇಹ ಹೊಂದಿರುವ ಜನರು ಹೆಚ್ಚು ತರಕಾರಿಗಳು, ಕಡಿಮೆ ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳನ್ನು ಸೇವಿಸಬೇಕು. ಹಾಗೆಯೇ ಕಹಿ, ಸಂಕೋಚಕ, ಘುಟು ಹೆಚ್ಚಿರುವ, ಸಿಹಿ, ಹುಳಿ ಮತ್ತು ಉಪ್ಪು ಕಡಿಮೆ ಇರುವ ಆಹಾರಗಳನ್ನು ತೆಗೆದುಕೊಳ್ಳಬೇಕು.
ಎಕ್ಟೋಮಾರ್ಫ್ ದೇಹವನ್ನು ಹೊಂದಿರುವವರಿಗೆ, ಹೆಚ್ಚು ಕಾರ್ಬೋಹೈಡ್ರೇಟ್ಗಳು, ಕಡಿಮೆ ತರಕಾರಿಗಳು ಮತ್ತು ಪ್ರೋಟೀನ್ಗಳನ್ನು ಸೇವಿಸಬೇಕು. ಹಾಗೆಯೇ ಸಿಹಿ, ಹುಳಿ, ಖಾರ, ಒಳ್ಳೆಯ ಕೊಬ್ಬು ಮತ್ತು ಎಣ್ಣೆಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಿ. ಕಹಿ, ಸಂಕೋಚಕ, ಕಟುವಾದವುಗಳನ್ನು ಮಿತವಾಗಿ ತೆಗೆದುಕೊಳ್ಳಬೇಕು. ನಿಮ್ಮ ದೇಹದ ಪ್ರಕಾರವನ್ನು ತಿಳಿಯಲು, ಆನುವಂಶಿಕ ಸಮಸ್ಯೆಗಳು, ಕಾರಣಗಳು ಮತ್ತು ವಯಸ್ಸನ್ನು ಪರೀಕ್ಷಿಸಬೇಕಾಗುತ್ತದೆ.
3. ಔಷಧಗಳ ಅಡ್ಡ ಪರಿಣಾಮಗಳು: ಪ್ರತಿಯೊಂದು ಔಷಧಿಯು ಶಕ್ತಿಯುತವಾಗಿದೆ. ಆದ್ದರಿಂದ ಅದನ್ನು ಬಳಸುವ ವಿಧಾನ ಮತ್ತು ಸಮಯ ವಿಭಿನ್ನವಾಗಿರುತ್ತದೆ. ಕೆಲವು ಆಹಾರಗಳು ಔಷಧಿಗಳ ಸಂಯೋಜನೆಯಿಂದಾಗಿ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಹೆಚ್ಚು ಔಷಧವನ್ನು ಸೇವಿಸುವುದರಿಂದ ಯಕೃತ್ತಿಗೆ ಹಾನಿಯಾಗುತ್ತದೆ. ಕೆಲವು ಔಷಧಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಆಯಾಸ, ಉಸಿರಾಟದ ತೊಂದರೆ, ನೀಲಿ ಬೆರಳುಗಳು ಮತ್ತು ತುಟಿಗಳು, ರಕ್ತಹೀನತೆ, ರಕ್ತಸ್ರಾವ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ಮಾತ್ರೆಗಳು ಸ್ತನ ಮೃದುತ್ವ, ತಲೆನೋವು, ವಾಕರಿಕೆ, ಉಬ್ಬುವುದು, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.
4. ಆಲ್ಕೋಹಾಲ್‌ನಲ್ಲಿ ಮಿತ, ಸೀಮಿತ ಮತ್ತು ಸಾಮಾಜಿಕ ಎಂದು ಪ್ರತ್ಯೇಕತೆ ಏನೂ ಇರಲ್ಲ: ಔಷಧವನ್ನು ಬಳಸುವಾಗ ಆಲ್ಕೋಹಾಲ್ ಸೇವಿಸುವುದು ಸೂಕ್ತವಲ್ಲ. ಎರಡರ ಸಂಯೋಜನೆಯು ಆಂತರಿಕ ಸ್ರವಿಸುವಿಕೆ, ಹೃದಯದ ತೊಂದರೆಗಳು, ಉಸಿರಾಟದ ತೊಂದರೆ, ವಾಂತಿ, ತಲೆನೋವು, ತೂಕಡಿಕೆ, ಮೂರ್ಛೆ ಮುಂತಾದ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೇ ಆಲ್ಕೋಹಾಲ್ ಚೇತರಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
5. ಕೆಲವು ಆಹಾರಗಳು ರೋಗಕ್ಕೆ ಮೂಲ - ಹಾಗಾದರೆ ವಾಸ್ತವ ಏನು?: ಎಲ್ಲಾ ಆಹಾರ ಕಂಪನಿಗಳು ನಿಮ್ಮ ಚಟದಿಂದ ಲಾಭ ಪಡೆಯುತ್ತವೆ. ಲಾಜಿಸ್ಟಿಕಲ್ ಪ್ರಯೋಜನಗಳು, ಬಣ್ಣ ಏಜೆಂಟ್‌ಗಳು ಮತ್ತು ವ್ಯಸನಕಾರಿಯಾಗಿ ರುಚಿಕರವಾದ ಪದಾರ್ಥಗಳನ್ನು ಒಟ್ಟಿಗೆ ತಯಾರಿಸಲಾಗುತ್ತದೆ. ಇವು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತವೆ. ಪ್ಯಾಕ್ ಮಾಡಲಾದ ಮತ್ತು ಸಂಸ್ಕರಿಸಿದ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಹೊರಗಡೆ ಇರುವುದಕ್ಕಿಂತ ಹೆಚ್ಚು ಕಾಲ ಇರುತ್ತವೆ. ಇವು ನಿಮ್ಮ ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಆದ್ದರಿಂದ ನೀವು ಯಾವಾಗಲೂ ತಾಜಾ, ಬೇಯಿಸಿದ ಪದಾರ್ಥಗಳಿಗೆ ಆದ್ಯತೆ ನೀಡಬೇಕು. ಗುಣಮಟ್ಟದ ಜೀವನ ನಡೆಸಲು ಆದ್ಯತೆ ನೀಡಬೇಕು. ಮಿತ ಆಹಾರ ಸೇವನೆ ಮಾಡುವುದು ಉತ್ತಮ
ಮುಖ್ಯ ಸೂಚನೆ: ಮೇಲೆ ನಿಮಗೆ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.