ಬಾಡಿಗೆದಾರರಲ್ಲ, ಮಾಲೀಕರೇ ಮನೆ ಖಾಲಿ ಮಾಡಬೇಕಾಗುತ್ತೆ: ಕಲಬುರಗಿ ಡಿಸಿ ಖಡಕ್ ಎಚ್ಚರಿಕೆ - kalaburagi dc latest pressmeet
🎬 Watch Now: Feature Video
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತರಿಗೆ ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್ ಮತ್ತು ಇಎಸ್ಐಸಿ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಗೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕರು ಸೂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ಸೂಚನೆ ಮನೆ ಮಾಲೀಕರು ನೀಡುವಂತಿಲ್ಲ. ಒಂದು ವೇಳೆ ನೀಡಿದ್ದಲ್ಲಿ ಮನೆ ಖಾಲಿ ಮಾಡುವುದು ಬಾಡಿಗೆದಾರರಲ್ಲ, ಮನೆ ಮಾಲೀಕರು. ಅಂತಹ ಮನೆ ಮಾಲೀಕರಿಗೆ ತಾತ್ಕಾಲಿಕ ವಸತಿ ನಿಲಯದಲ್ಲಿ ವಾಸಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮನೆ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.